Site icon Suddi Belthangady

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲದ ನೂತನ ಸದಸ್ಯರಿಗೆ ಪ್ರಮಾಣ ವಚನ ಸಮಾರಂಭ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 22ರಂದು ಶಾಲಾ ಮಂತ್ರಿಮಂಡಲದ ನೂತನ ಸದಸ್ಯರಿಗೆ ಪ್ರಮಾಣ ವಚನ ಸಮಾರಂಭವನ್ನು ಏರ್ಪಡಿಸಲಾಯಿತು.ಶಾಲಾ ಮುಖ್ಯೋಪಾಧ್ಯಾಯ ವಂ.ಫಾ.ಕ್ಲಿಫರ್ಡ್ ಪಿಂಟೋ ಶಾಲಾ ಮಂತ್ರಿ ಮಂಡಲದ ಸದಸ್ಯರಿಗೆ ಪ್ರಮಾಣ ವಚನವನ್ನು ಬೋಧಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಬೆಳ್ತಂಗಡಿ ಆರಕ್ಷಕ ಠಾಣೆಯ ಉಪನಿರೀಕ್ಷಕ ಅರ್ಜುನ್ ರವರು ಮಂತ್ರಿಮಂಡಲದ ಕಾರ್ಯ ವೈಖರಿ, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರ ಜವಾಬ್ದಾರಿಯನ್ನು ತಿಳಿಸುವುದರ ಜೊತೆಗೆ ಶಾಲಾ ಮಂತ್ರಿಮಂಡಲದ ನಾಯಕರ ಸಂದೇಹಗಳಿಗೆ ಉತ್ತರಿಸಿದರು.ಶಾಲಾ ಸಂಚಾಲಕ ವಂ.ಫಾ.ವೋಲ್ಟರ್ ಡಿಮೆಲ್ಲೋರವರು ಶಾಲಾ ಮಂತ್ರಿ ಮಂಡಲದ ನಾಯಕರಿಗೆ ಉತ್ತಮ ನಾಯಕತ್ವ ಗುಣ ಹಾಗೂ ಶಿಸ್ತಿನಿಂದ ತಮಗೆ ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿ ಶಾಲೆಯ ಪ್ರಗತಿಗೆ ಸಹಕರಿಸಬೇಕೆಂದು ಕಿವಿಮಾತು ನೀಡಿ ಆಶೀರ್ವದಿಸಿದರು.

ಸಹಶಿಕ್ಷಕಿಯರಾದ ಅನಿತಾ ಕೆ ಸ್ವಾಗತಿಸಿ, ಎಲ್ವಿಟಾ ಪಾಯ್ಸ್ ವಂದಿಸಿದರು. ಸಹಶಿಕ್ಷಕಿ ಕು.ವಿದ್ಯಾಶ್ರೀ ಕಾರ್ಯಕ್ರಮ ನಿರ್ವಹಿಸಿದರು.

Exit mobile version