Site icon Suddi Belthangady

ಪೆರಿಂಜೆ: ಶ್ರೀ.ಧ.ಮ.ಅ.ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಚುನಾವಣೆ

ಪೆರಿಂಜೆ: ಶ್ರೀ.ಧ.ಮ. ಅನುದಾನಿತ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರಕಾರದ ಚುನಾವಣೆ ನಡೆಯಿತು. ಶಾಲಾ ನಾಯಕ ಹಾಗು ಉಪನಾಯಕನ ಸ್ಥಾನಕ್ಕೆ ವಿದ್ಯಾರ್ಥಿಗಳು ಡಿಜಿಟಲ್ ಮಾದರಿಯಲ್ಲಿ ಮತ ಚಲಾಯಿಸಿದರು.

ನಾಯಕನ ಸ್ಥಾನಕ್ಕೆ ಸಂಬ್ರಾನ್ (10ನೇ) ಹಾಗು ಉಪನಾಯಕನ ಸ್ಥಾನಕ್ಕೆ ಸುಮಂತ್ (9ನೇ) ಆಯ್ಕೆಯಾದರು.ವಿರೋಧ ಪಕ್ಷದ ನಾಯಕರಾಗಿ ಪಾರ್ಥ ನಿತಿನ್ ಕುಮಾರ್ (10ನೇ) ಹಾಗು ಸೂರ್ಯ (9ನೇ) ಆಯ್ಕೆಯಾದರು.

ಚುನಾವಣೆ ಬಳಿಕ ಮಂತ್ರಿ ಮಂಡಲದ ವಿವಿಧ ಸದಸ್ಯರುಗಳ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.ಶಾಲಾ ಮುಖ್ಯೋಪಾಧ್ಯಾಯರು ಹಾಗು ಶಿಕ್ಷಕ ವೃಂದದವರು ಚುನಾವಣಾ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ವ್ಯವಸ್ಥೆಗೊಳಿಸಿದ್ದರು.

Exit mobile version