Site icon Suddi Belthangady

ಬೆಳಾಲು: ಪ್ರೌಢಶಾಲೆಯಲ್ಲಿ ಯಕ್ಷಗಾನ ನಾಟ್ಯ ತರಗತಿ ಆರಂಭ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಶ್ರೀ ಧ.ಮಂ ಆಡಳಿತ ಮಂಡಳಿಯ ವತಿಯಿಂದ ಉಚಿತ ಯಕ್ಷಗಾನ ತರಗತಿಯು ಆರಂಭವಾಯಿತು.

ವಾರದಲ್ಲಿ ಒಂದು ತರಗತಿಯು ನಿರಂತರವಾಗಿ ನಡೆಯಲಿದ್ದು, ಇದರ ಉದ್ಘಾಟನೆಯನ್ನು ನೆರವೇರಿಸಿದ ಬೆಳಾಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ದಾಮೋದರ ಗೌಡ ಸುರುಳಿಯವರು ಮಾತನಾಡುತ್ತಾ, ಯಕ್ಷಗಾನ ಕಲಿಕೆಯ ಮೂಲಕ ನಮ್ಮ ಪುರಾಣಗಳ ಬಗ್ಗೆ ತಿಳುವಳಿಕೆಯೊಂದಿಗೆ, ಜೀವನ ಮೌಲ್ಯಗಳ ಅರಿವಿನೊಂದಿಗೆ ಸಂಸ್ಕೃತಿಯ ಪರಿಚಯ ಮತ್ತು ಸಂಸ್ಕಾರವೂ ಸಿಗಲಿದೆಯೆಂದು ಅಭಿಪ್ರಾಯಪಟ್ಟರು.

ಸಮಾರಂಭದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ವಹಿಸಿದ್ದರು. ಯಕ್ಷಗಾನ ನಾಟ್ಯ ಗುರುಗಳಾಗಿ ಖ್ಯಾತ ಯಕ್ಷಗಾನ ಕಲಾವಿದರಾದ ಪಿ.ಲಕ್ಷ್ಮಣ ಗೌಡ ತರಬೇತಿಯನ್ನು ನೀಡಲಿದ್ದಾರೆ.ವೇದಿಕೆಯಲ್ಲಿ ಶಿಕ್ಷಕ ಸಿಬ್ಬಂದಿಗಳೆಲ್ಲರು ಉಪಸ್ಥಿತರಿದ್ದರು.

ನಾಟ್ಯ ತರಗತಿಯ ವಿದ್ಯಾರ್ಥಿಗಳಾದ ಕು.ಅಶ್ವಿನಿ ಸ್ವಾಗತಿಸಿ, ಕೀರ್ತಿ ವಂದಿಸಿದರು, ಕು.ಅಂಕಿತಾ ಕಾರ್ಯಕ್ರಮ ನಿರೂಪಿಸಿದರು.

Exit mobile version