ಪುಂಜಾಲಕಟ್ಟೆ: ಮಂಜಲ್ ಪಲ್ಕೆ ಜೈ ಹನುಮಾನ್ ಮಹಿಳಾ ಭಜನಾ ಮಂಡಳಿಯ ಮಹಾಸಭೆಯನ್ನು ಜೈ ಹನುಮಾನ್ ಮಂದಿರದ ವಠಾರದಲ್ಲಿ ನಡೆಸಲಾಯಿತು.ಸಭೆಯಲ್ಲಿ 2024-25ರ ಸಾಲಿನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು.
ಜೈ ಹನುಮಾನ್ ಮಹಿಳಾ ಭಜನಾ ಮಂಡಳಿಯ ನೂತನ ಅಧ್ಯಕ್ಷರಾಗಿ ಹೇಮಾವತಿ ಎಸ್ ಗೌಡ ಹಟ್ಟತ್ತೋಡಿ, ಉಪಾಧ್ಯಕ್ಷರಾಗಿ ಸುರೇಖಾ ಶೆಟ್ಟಿ ಕುರುಡುಮೆ, ಪ್ರಧಾನ ಕಾರ್ಯದರ್ಶಿಯಾಗಿ ಪುಷ್ಪಲತಾ ಮಹೇಶ್ ಅನಿಲಡೆ, ಜೊತೆ ಕಾರ್ಯದರ್ಶಿಯಾಗಿ ಅರುಣಾ ಪ್ರಭು ಹಾಗೂ ಕೋಶಾಧಿಕಾರಿಯಾಗಿ ಭಾರತಿ ಗಿರೀಶ್ ಅನಿಲಡೆ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.