ಬಳಂಜ: ನಾಲ್ಕೂರು ಗ್ರಾಮದ ಕುರೆಲ್ಯ ಗುತ್ತು ಬಾಲಕೃಷ್ಣ ಶೆಟ್ಟಿ(70 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಜೂನ್ 22ರಂದು ವಿಧಿವಶರಾಗಿದ್ದಾರೆ.
ಇವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ ಸಮಾಜದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು.ಉತ್ತಮ ವಾಗ್ಮಿಗಳಾಗಿ,ಯಕ್ಷಗಾನ ಅರ್ಥಧಾರಿಗಳಾಗಿಯೂ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ ಕಸ್ತೂರಿ ಶೆಟ್ಟಿ, ಏಕೈಕ ಪುತ್ರಿ ಚೈತ್ರರಶ್ಮಿ, ಅಳಿಯ ಹಾಗೂ ಸಹೋದರ, ಸಹೋದರಿಯರು ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.