Site icon Suddi Belthangady

ಕನ್ಯಾಡಿ-1: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಕನ್ಯಾಡಿ-1: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.2024ರ ಯೋಗ ದಿನದ ಧ್ಯೇಯ ವಾಕ್ಯ self and society ಮಾನವತೆಗಾಗಿ ಯೋಗ ಇಡೀ ವಿಶ್ವವನ್ನೇ ಕುಟುಂಬ ಸಮಾನವಾಗಿಸುವಲ್ಲಿ ಯೋಗ.ಬದುಕಿಗೆ ಬೇಕು ಯೋಗ ಸ್ಥಿರವಾಗಿರುವುದು ನಮ್ಮ ಆರೋಗ್ಯ.ಯೋಗಿಗಳ ನಾಡಲ್ಲಿ ಯೋಗ ಗೆದ್ದ ದಿನ ಭೋಗಿಗಳ ನಾಡಲ್ಲಿ ಯೋಗ ಮೆರೆದ ದಿನ ಯೋಗವು ಮನುಷ್ಯನನ್ನು ಸದಾ ಉತ್ಸಾಹದಿಂದ ಲವಲವಿಕೆಯಿಂದ ಆರೋಗ್ಯವಾಗಿ ಬದುಕಲು ಅವನಿಗೆ ಸಹಾಯವನ್ನು ಮಾಡುತ್ತದೆ ಯೋಗವನ್ನು ಮಾಡಿದರೆ ರೋಗಗಳು ಅವನಿಂದ ದೂರವಾಗುವುದು.

ಸಕಲ ರೋಗಗಳನ್ನು ದೂರ ಮಾಡುವುದು ಇದೇ ಯೋಗ, ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ ಜ್ಞಾನವನ್ನು ಒಂದು ಕಡೆ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ ವ್ಯಕ್ತಿಯ ಸಾಧನೆಗೆ ಯೋಗ ಪರಿಣಾಮಕಾರಿಯಾಗುತ್ತದೆ, ವಿದ್ಯಾರ್ಥಿಗಳಿಗೆ ಯೋಗ ಮಾಡುವುದರಿಂದ ಬಹು ಉಪಯೋಗವಾಗುತ್ತದೆ ಹೀಗೆ ವಿದ್ಯಾರ್ಥಿಗಳಿಗೆ ಯೋಗ ಮತ್ತು ಯೋಗದ ಮಹತ್ವ ಹಾಗೆ ಯೋಗದ ಅನೇಕ ಭಂಗಿಗಳು ತಡಾಸನ, ಬ್ರಹ್ಮ ಮುದ್ರೆ, ಭುಜಂಗಾಸನ, ಸೂರ್ಯ ನಮಸ್ಕಾರದ 12 ವಿಧಾನಗಳು ಇತ್ಯಾದಿ ಶಿಕ್ಷಕರು ಮಾಹಿತಿಯನ್ನು ತಿಳಿಸಿದರು.

ವಿದ್ಯಾರ್ಥಿಗಳು ಹಾಡಿನ ಮೂಲಕ ಯೋಗದ ಆಸನಗಳನ್ನ ಪ್ರದರ್ಶಿಸಿದರು. ಶಾಲೆಯ ಪ್ರಧಾನ ಗುರುಗಳಾದ ಹನುಮಂತರಾಯ ಸಹ ಶಿಕ್ಷಕರಾದ ವಿಕಾಸ್ ಕುಮಾರ್ ವೈ, ಶ್ರೀದೇವಿ ಎಂ, ಹರಿತಾ, ಪ್ರಮೀಳಾ, ನಿಶ್ಮಿತಾ, ಯಶೋಧ ಇವರು ಯೋಗಾಸನವನ್ನು ಮಕ್ಕಳಿಗೆ ಪ್ರದರ್ಶಿಸಿದರು ಹಾಗೂ ಉಪ ಆರೋಗ್ಯ ಕೇಂದ್ರ ಕನ್ಯಾಡಿ-1ರ ಸಮುದಾಯ ಆರೋಗ್ಯ ಅಧಿಕಾರಿ ಯಶೋಧರವರು ಯೋಗದ ಮಹತ್ವದ ಕುರಿತು ಮಾಹಿತಿಯನ್ನು ಮಕ್ಕಳ ಜೊತೆಗೆ ಹಂಚಿಕೊಂಡರು.

Exit mobile version