ಮುಂಡಾಜೆ: ಮುಂಡಾಜೆ ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಮಕ್ಕಳಿಗೆ ಯೋಗದ ಮಹತ್ವವನ್ನು ತಿಳಿಸಿಸಲಾಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬ್ಯಾಚುಲರ್ ಆಫ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಧರ್ಮಸ್ಥಳ ಇಲ್ಲಿಯ ಡಾ.ಮಾರುತಿ ಹಾಗೂ ಚಿನ್ಮಯಿ ಇವರು ಆಗಮಿಸಿದ್ದರು.
ಡಾ.ಮಾರುತಿಯವರು ಮಕ್ಕಳಿಗೆ ಯೋಗದ ಬಗೆಗಿನ ಮಹತ್ವ, ಯೋಗ ಮಾಡುವಾಗ ವಹಿಸಬೇಕಾದ ಎಚ್ಚರಿಕೆಗಳನ್ನು ಹಾಗೂ ಆಸನ ಮಾಡುವುದು ಮಾತ್ರ ಯೋಗವಲ್ಲ ಅದು ನಮ್ಮ ಜೀವನಕ್ರಮ ಎಂದು ತಿಳಿಸಿದರು.ನಂತರ ವಿದ್ಯಾರ್ಥಿಗಳಿಗೆ ಆಸನ ಅಭ್ಯಾಸಗಳನ್ನು ಮಾಡಿಸಲಾಯಿತು.
ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕ ನಾರಾಯಣ, ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಚಂದ್ರಮತಿ, ಮುಂಡಾಜೆ ಪದವಿಪೂರ್ವ ಕಾಲೇಜು ಇಲ್ಲಿಯ ಪ್ರಾಂಶುಪಾಲರು ಉಪಸ್ಥಿತರಿದ್ದರು.