ಬೆಳ್ತಂಗಡಿ: ವಾಹನಗಳಿಗೆ ಎಲ್‌ಇಡಿ ಲೈಟ್ ಅಳವಡಿಸುವುದನ್ನು ನಿರ್ಬಂಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಜುಲೈ 1ರಿಂದಲೇ ಕೇಸ್ ಬೀಳಲಿದೆ. ಬೆಳ್ತಂಗಡಿಯಲ್ಲಿ ಸಂಚಾರ ಠಾಣೆ ವತಿಯಿಂದ ಎಲ್ ಇಡಿ ಲೈಟ್ ಅಳವಡಿಸಿದ ವಾಹನಗಳನ್ನು ಪತ್ತೆ ಹಚ್ಚಿ ತೆರವುಗೊಳಿಸಲು ಎಸ್ ಐ ಅರ್ಜುನ್ ಚಾಲಕರಿಗೆ ಬಸ್ ನಿಲ್ದಾಣದ ಬಳಿ ಜೂ.21ರಂದು ಸೂಚನೆ ನೀಡಿದರು. ಎಲ್ ಇಡಿ ಲೈಟ್ ಅಳವಡಿಸಿದ್ದಲ್ಲಿ ದಂಡ ವಿಧಿಸಲಾಗುತ್ತದೆ. ಶೀಘ್ರವೇ ಅಳವಡಿಸಿದ್ದಲ್ಲಿ ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಸಿಬ್ಬಂದಿಗಳಾದ ಆಶಿಫ್ ಮತ್ತು ವಸಂತ ಹಾಜರಿದ್ದರು.
ಏನಿದು ಕಾಯ್ದೆ: ಇತ್ತೀಚಿನ ದಿನಗಳಲ್ಲಿ ಭಾರಿ ವಾಹನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ಬಲ್ಟ್ ಅಳವಡಿಸಲಾಗುತ್ತಿದೆ. ಇದರಿಂದ ಎದುರು ಬರುವ ವಾಹನಗಳಿಗೆ ತೊಂದರೆ ಆಗಿ ರಸ್ತೆ ಅಪಘಾತ ಹೆಚ್ಚಳವಾಗುತ್ತಿದೆ. ಹೀಗಾಗಿ ವಾಹನ ಮಾಲೀಕರು ಕಡ್ಡಾಯವಾಗಿ ಕೇಂದ್ರ ಮೋಟಾರು ವಾಹನ ಕಾಯ್ದೆಯಂತೆ ಮಾರ್ಗಸೂಚಿ ಪಾಲಿಸಬೇಕು, ಇಲ್ಲವಾದರೆ ಸವಾರ, ಚಾಲಕರ ವಿರುದ್ಧ ಐಎಂವಿ ಕಾಯ್ಕೆಯ ಕಲಂ 177 ರಡಿ ಕ್ರಮ ಕೈಗೊಳ್ಳುವುದಾಗಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಎಚ್ಚರಿಸಿದ್ದಾರೆ.