ಬೆಳ್ತಂಗಡಿ: ಯೋಗ ಎನ್ನುವುದು ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗಿರದೆ ನಮ್ಮ ಪ್ರತಿನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಿರಬೇಕು.
ಯೋಗ ಮಾಡಿದವನಿಗೆ ರೋಗ ಇಲ್ಲ ಎನ್ನುವ ಮಾತಿದೆ, ಅಷ್ಟು ಶಕ್ತಿಯುತವಾದ ಯೋಗವು ಮನುಷ್ಯನ ಶಾರೀರಿಕ ಮತ್ತು ಮಾನಸಿಕ ನೆಮ್ಮದಿಗೆ ಸಹಕಾರಿಯಾಗಿದೆ ಎಂದು ಪಟ್ಟೂರು ಶ್ರೀರಾಮ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಶೇಟ್ ನುಡಿದರು.
ಜೂನ್ 21ರಂದು ವಿಶ್ವ ಯೋಗ ದಿನಾಚರಣೆಯ ಪ್ರಯುಕ್ತ ಪಟ್ರಮೆ ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾ ಸಂಸ್ಥೆಯಲ್ಲಿ ನಡೆದ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳಿಗೆ ಯೋಗಾಸನದ ಭಂಗಿಗಳನ್ನು ತಿಳಿಸಿಕೊಟ್ಟರು.
ಶಾಲೆಯ ಯೋಗ ಶಿಕ್ಷಣದ ಪ್ರಮುಖರಾದ ಶುಭಲಕ್ಷ್ಮಿ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.ಸಹ ಶಿಕ್ಷಕರು ಸಹಕರಿಸಿದರು.