ಬೆಳ್ತಂಗಡಿ: ಸಂತ ತೆರೇಸಾ ಸಯುಕ್ತ ಪದವಿ ಪೂರ್ವ ಕಾಲೇಜಿನ ಶಾಲಾ ಸಭಾಂಗಣದಲ್ಲಿ ಪ್ರಾಂಶುಪಾಲೆ ಭಗಿನಿ ಆರೋಗ್ಯರವರ ಮುಂದಾಳತ್ವದ ಪ್ರಾರ್ಥನೆಯ ಮೂಲಕ ಯೋಗ ಕಾರ್ಯಕ್ರಮಕ್ಕೆ ಜೂ.21ರಂದು ಚಾಲನೆಯನ್ನು ನೀಡಲಾಯಿತು.
ವಿದ್ಯಾರ್ಥಿಗಳು ಯೋಗದ ಮಹತ್ವವನ್ನು ವಿವರಿಸಿದರು.
ಉಪನ್ಯಾಸಕಿ ಝೀಟಾರವರ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಯೋಗಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.