ಉಜಿರೆ: ಅನುಗ್ರಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಶಾಲಾ ಸಭಾಭವನದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ವಂ.ಫಾ.ಅಬೆಲ್ ಲೋಬೊ ಹಾಗೂ ಪ್ರಾಂಶುಪಾಲ ವಂ.ಫಾ. ವಿಜಯ್ ಲೋಬೋ, ಶಾಂತಿವನ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ವೈದ್ಯರು ಹಾಗೂ ಶಾರೀರಿಕ ಶಿಕ್ಷಕ ವಸಂತ ಹೆಗ್ಡೆರವರ ಜೊತೆಗೂಡಿ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಯೋಗ ದಿನಾಚರಣೆಗೆ ಶುಭವನ್ನು ಕೋರಿದರು.
ತದನಂತರ ಡಾ.ಖುಷಿ, ಡಾ.ಹರ್ಷಿತಾ, ಡಾ.ಸುಪ್ರಿತಾ, ಡಾ.ಹಿತಾಶ್ರೀ ಹಾಗೂ ಡಾ.ಸಾರಂಗಿರವರ ಮಾರ್ಗದರ್ಶನದಲ್ಲಿ ಯೋಗ ಪ್ರಾತ್ಯಕ್ಷಿಕೆ ನಡೆಯಿತು.
ಹಿರಿಯ ಶಿಕ್ಷಕಿ ವಿನಯಲತಾ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು.