ಬೆಳ್ತಂಗಡಿ: ಗೇರುಕಟ್ಟೆ ನ್ಯಾಯತರ್ಪು ಗ್ರಾಮದ ವಂಜಾರೆ ನಿವಾಸಿ ವಿಕ್ರಮ್ ಜೆ.ಎನ್ 19 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ಜು.3ರಂದು ನಿವೃತ್ತ ಯೋಧ ವಿಕ್ರಂ ಜೆ.ಎನ್. ರಾಜಸ್ಥಾನದಿಂದ ಹುಟ್ಟೂರಿಗೆ ಆಗಮಿಸುವ ಪ್ರಯುಕ್ತ ಅದ್ದೂರಿ ಸ್ವಾಗತ, ಅಭಿನಂದನಾ ಸಮಿತಿ ರಚನೆ ಹಾಗೂ ಸಮಾಲೋಚನೆ ಸಭೆ ಕಳಿಯ ಕೃಷಿ ಪತ್ತಿನ ಸಹಕಾರ ಸಂಘದ ವಠಾರದಲ್ಲಿ ಜೂ.17ರಂದು ಸಂಜೆ ಜರುಗಿತು.ಸಮಿತಿ ಅಧ್ಯಕ್ಷರಾಗಿ ವಸಂತ ಮಜಲು, ಸಂಚಾಕಲರಾಗಿ ಸುರೇಶ್ ಕುಮಾರ್ ಆರ್.ಎನ್, ವಿಜಯ ಕುಮಾರ್ ಕೆ, ಜನಾರ್ದನ ಗೌಡ ಕೆ, ವಿಠ್ಠಲ ಶೆಟ್ಟಿ ಯು, ಪ್ರಕಾಶ್ ಪೂಜಾರಿ ಪಿ,ಕೆ.ಎನ್ ಗೌಡ,ಯಾದವ ಗೌಡ ಎಮ್,ಉಮೇಶ ಕೆ, ಭುವನೇಶ್ ಜಿ, ವಸಂತ ಕುಮಾರ್, ನೇವಿಲ್ ಸ್ಟೀವನ್ ಮೊರಾಸ್, ರಂಜನ್ ಹೆಚ್, ತುಕರಾಮ ಪೂಜಾರಿ, ಅಬ್ದುಲ್ ಕರೀಂ ಕೆ.ಎಮ್, ಕೋಶಾಧಿಕಾರಿ ನಿವೃತ್ತ ಸೈನಿಕ ದಿನೇಶ ಗೌಡ ಕೆ ಅವರನ್ನು ಆಯ್ಕೆ ಮಾಡಿದರು.
2005ರಂದು ಮಹಾರಾಷ್ಟ್ರದ ಪೂಣೆ ಯಲ್ಲಿರುವ ಸೈನಿಕ ತರಬೇತಿಗೆ ಆಯ್ಕೆಯಾಗಿ ಸುಮಾರು 19 ವರ್ಷಗಳ ಕಾಲಸೇವೆ ಸಲ್ಲಿಸಿ ಜು.3ರಂದು ರಾಜಸ್ಥಾನದಿಂದ ಮಂಗಳೂರಿಗೆ ಆಗಮಿಸಿ, ವಾಹನ ಜಾಥದೊಂದಿಗೆ ಬೆಳ್ತಂಗಡಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಿಂದ ಬೆಳ್ತಂಗಡಿ ಬಸ್ ನಿಲ್ದಾಣದ ಮೂಲಕ ಗುರುವಾಯನಕೆರೆಯಿಂದ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ಹುಟ್ಟೂರಿಗೆ ಆಗಮಿಸಿ, ಗೇರುಕಟ್ಟೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಅಭಿನಂದನಾ ಸಭೆ ನಡೆಯಲಿದೆ.
ಈ ಸಂದರ್ಭದಲ್ಲಿ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ವಿಜೃಂಭಣೆಯಿಂದ ಸ್ವಾಗತಿಸುವ ಬಗ್ಗೆ ಸಭೆಯಲ್ಲಿ ತೀರ್ಮಾಸಿದರು. ಹಾಗೂ ನಿವೃತ್ತ ಯೋಧರ ಹುಟ್ಟೂರಿಗೆ ಸ್ವಾಗತ ಮತ್ತು ಅಭಿನಂದನಾ ಸಭೆಯ ಯಶಸ್ವಿಗೆ ಗ್ರಾಮಸ್ಥರು, ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದು ಸಮಿತಿ ಅಧ್ಯಕ್ಷ ವಸಂತ ಮಜಲು ಸಭೆಯಲ್ಲಿ ತಿಳಿಸಿದರು.
ಕಳಿಯ ಪಂಚಾಯತ್ ಅಧ್ಯಕ್ಷ ದಿವಾಕರ ಎಮ್, ಉಪಾಧ್ಯಕ್ಷೆ ಇಂದಿರಾ ಬಿ ಶೆಟ್ಟಿ, ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಜಿ., ನಿವೃತ್ತ ಸೈನಿಕ ಐ.ಎಮ್.ಸುಬ್ರಮಣಿ, ನಿವೃತ್ತ ಅಂಚೆ ಅಧಿಕಾರಿ ಕೂಸಪ್ಪ ಗೌಡ, ನಿವೃತ್ತಿಯ ಸೈನಿಕರ ತಂದೆ ಜನಾರ್ದನ ಪೂಜಾರಿ, ತಾಯಿ ಅಂಗನವಾಡಿ ಕಾರ್ಯಕರ್ತೆ ನಾಗವೇಣಿ ಕೆ.ಎಸ್, ಪತ್ನಿ ಪ್ರಮೀಳಾ ವಿಕ್ರಮ್ ಮತ್ತು ಮಕ್ಕಳು, ಕಳಿಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು, ಸದಸ್ಯರು, ಹಾಲು ಉತ್ಪಾದಕರ ಸಂಘದ ನಿರ್ದೇಶಕರು, ಕಳಿಯ ಸಿ.ಎ.ಬ್ಯಾಂಕ್ ನಿರ್ದೇಶಕರು, ಧಾರ್ಮಿಕ, ಶೈಕ್ಷಣಿಕ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಮೇಶ್ ಕೇಲ್ದಡ್ಕ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಸಂತ ಕುಮಾರ್ ಧನ್ಯವಾವಿತ್ತರು.