Site icon Suddi Belthangady

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಹಾಗೂ ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟ ನೇತೃತ್ವದಲ್ಲಿ ಒಕ್ಕೂಟ ಬಲವರ್ಧನೆ ಮತ್ತು ನಾಯಕತ್ವ ಬಗ್ಗೆ ತರಬೇತಿ

ಬೆಳ್ತಂಗಡಿ: ಸಂಸ್ಥೆ ಮತ್ತು ಸಂಘಟನೆಗಳು ಬೆಳೆಯ ಬೇಕಾದರೆ ನಮ್ಮಲ್ಲಿರುವ ಯೋಚನೆಗಳನ್ನು ಅದರ ಅಭಿವೃದ್ಧಿಗೆ ಅಳವಡಿಸಬೇಕು. ನಾಯಕರಾಗಿ ನಾವು ಜವಾಬ್ದಾರಿ, ಆತ್ಮವಿಶ್ವಾಸ ಬೆಳೆಸಿ ಅವುಗಳ ಬಲವರ್ಧನೆಗೆ ಪ್ರಯತ್ನಿಸಬೇಕು ಎಂದು ಜೂ.18ರಂದು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಿದ ಒಕ್ಕೂಟ ಬಲವರ್ಧನೆ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಬೆಳ್ತಂಗಡಿ ಧರ್ಮಪ್ರಾಂತ್ಯದ ವಂ.ಫಾ.ಜೋಸೆಫ್ ಚೀರನ್ ರವರು ತರಬೇತಿ ನೀಡಿದರು.

ಡಿ.ಕೆ.ಆರ್.ಡಿ.ಎಸ್ ಸಂಸ್ಥೆಯ ನಿರ್ದೇಶಕ ವಂ.ಫಾ.ಬಿನೋಯಿ ಎ.ಜೆ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹ ಕಿರಣ್ ಮಹಿಳಾ ಜಿಲ್ಲಾ ಒಕ್ಕೂಟದ ಅಧ್ಯಕ್ಷೆ ಎಲಿಯಮ್ಮ ತೋಮಸ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರಾದ ಜಿನ್ಸಿ ರಾಜೇಶ್ ಎಲ್ಲರನ್ನು ಸ್ವಾಗತಿಸಿದರು. ನಿಶಾ ಆಗಸ್ಟಿನ್ ವಂದಿಸಿದರು. ಯೋಜನಾ ಸಂಯೋಜಕಿ ಸಿಸಿಲ್ಯಾ ತಾವ್ರೊ ಮತ್ತು ಕಾರ್ಯಕರ್ತರು ಹಾಗೂ ಒಕ್ಕೂಟದ ಸದಸ್ಯರು ಭಾಗವಹಿಸಿದ್ದರು.

Exit mobile version