Site icon Suddi Belthangady

ಕಾಶಿಪಟ್ಣ: ಸ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ

ಕಾಶಿಪಟ್ಣ: ಸ.ಹಿ.ಪ್ರಾ ಶಾಲೆಯಲ್ಲಿ ಜೂ.5ರಂದು ಶಾಲಾ ಮಂತ್ರಿಮಂಡಲ ರಚನೆಗೆ ಚುನಾವಣೆಯನ್ನು ಶಾಲೆಯಲ್ಲಿ ನಡೆಸಲಾಯಿತು.ಶಾಲಾ ಸಂಸತ್ತಿನ ಚುನಾವಣೆಯನ್ನು ಮುಖ್ಯ ಶಿಕ್ಷಕರು ಮತ್ತು ಸಹ ಶಿಕ್ಷಕರ ಸಹಕಾರದೊಂದಿಗೆ ನಡೆಸಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ ಮಯಾಂಕ್ (7ನೇ), ಉಪಮುಖ್ಯಮಂತ್ರಿಯಾಗಿ ಶರಣ್ (6ನೇ), ಗೃಹ ಮಂತ್ರಿಯಾಗಿ ಆಯುಷ್ (7ನೇ), ಕ್ರೀಡಾ ಮಂತ್ರಿಯಾಗಿ ಪೃಥ್ವಿರಾಜ್ (7ನೇ), ಸಾಂಸ್ಕೃತಿಕ ಮಂತ್ರಿಯಾಗಿ ಐಶ್ವರ್ಯ (7ನೇ), ಆರೋಗ್ಯ ಮಂತ್ರಿಯಾಗಿ ಸಾನ್ವಿ (7ನೇ), ಶಿಸ್ತು ಮಂತ್ರಿಯಾಗಿ ಶರಣಿ (7ನೇ), ಶಿಕ್ಷಣ ಮಂತ್ರಿಯಾಗಿ ಅಪ್ಸಾ (7ನೇ), ಸ್ವಚ್ಛತಾ ಮಂತ್ರಿಯಾಗಿ ಸಹದಿಯ (6ನೇ), ಮುಕರ್ರಮ (6ನೇ), ನೀರಾವರಿ ಮಂತ್ರಿಯಾಗಿ ಅನಿಶ್(7ನೇ), ಪ್ರಥಮ್ (6ನೇ), ಕೃಷಿ ಮಂತ್ರಿಯಾಗಿ ಸೆರ್ಬಿನ್ (7ನೇ) ತರಗತಿಯ ವಿದ್ಯಾರ್ಥಿಗಳು ಆಯ್ಕೆಯಾದರು.

Exit mobile version