Site icon Suddi Belthangady

ಕಿಲ್ಲೂರು: ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ನಲ್ಲಿ ಈದ್ ಸಂಭ್ರಮ

ಕಿಲ್ಲೂರು: ಇತಿಹಾಸ ಪ್ರಸಿದ್ಧ ಮುಹಿಯುದ್ದೀನ್ ಜುಮಾ ಮಸ್ಜಿದ್ ನಲ್ಲಿ ಈದ್ ಆಚರಣೆಯು ಖತೀಬರಾದ ಬಹು ಶಂಶೀರ್ ಸಖಾಫಿ ಪರಪ್ಪು ಉಸ್ತಾದರ ನೇತೃತ್ವದಲ್ಲಿ ನಡೆಯಿತು.

ಸಂದೇಶ ಭಾಷಣ ಮಾಡಿದ ಉಸ್ತಾದರು ಅಲ್ಲಾಹನು ನೀಡಿದ ಅತ್ಯಂತ ಶ್ರೇಷ್ಠವಾದ ಒಂದು ಅನುಗ್ರಹ ವಾಗಿದೆ ಪೆರ್ನಾಲ್ ಎಂಬುವುದು. ಇಸ್ಲಾಮಿನ ಚೌಕಟ್ಟಿನಡಿಯಲ್ಲಿ ಆಗಿರಬೇಕು ಪ್ರತಿಯೊಬ್ಬರ ಆಚರಣೆ. ಮಾದಕ ದ್ರವ್ಯ, ಡ್ರಕ್ಸ್ ಗಳಿಂದ ದೂರವಿದ್ದು, ದಿನೇ ದಿನೇ ಅಪಘಾತ ಹೆಚ್ಚುತ್ತಿದ್ದು ಯುವಕರು ತನ್ನನ್ನೇ ನಂಬಿ ಜೀವಿಸುವ ಕುಟುಂಬವನ್ನು ನೆನಪಿನಲ್ಲಿಟ್ಟು ಅತಿ ವೇಗವನ್ನು ನಿಯಂತ್ರಿಸಿಬೇಕು ಎಂದು ಎಚ್ಚರಿಕೆ ನೀಡಿದರು.

ಆಡಳಿತ ಸಮಿತಿ ಅಧ್ಯಕ್ಷ ಬಹು ಅಬ್ದುಲ್ ಅಝೀಝ್ ಝುಹ್ರಿ, ಪ್ರಧಾನ ಕಾರ್ಯದರ್ಶಿ ಸಾಹುಲ್ ಹಮೀದ್ ಕೋಶಾಧಿಕಾರಿ ಅಬೂಬಕರ್ ಮಲ್ಲಿಗೆ ಮನೆ ಉಪಾಧ್ಯಕ್ಷರು ಹಮೀದ್ ಕಾರ್ಯದರ್ಶಿ ಹಂಝತ್, ಸಹಿತವಿರುವ ನಾಯಕರು ಹಿರಿಯರು ಕಿರಿಯರು ಮದರಸ ಅಧ್ಯಾಪಕರು ಸಂಘ ಕುಟುಂಬದ ನಾಯಕರು, ಕಾರ್ಯಕರ್ತರು ಸೇರಿ ಜಮಾಅತಿನ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಪರಸ್ಪರ ಹಸ್ತಲಾಘವ ಮಾಡಿ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.

ಖತೀಬ್ ಉಸ್ತಾದರ ನೇತೃತ್ವದಲ್ಲಿ ಸಾಮೂಹಿಕ ಖಬರ್ ಝಿಯಾರತ್ ನಡೆಯಿತು. ವಿಶೇಷವಾಗಿ ಇರ್ಶಾದುಶ್ಶಿಬಿಯಾನ್ ಮದರಸ ಎಸ್.ಬಿ.ಎಸ್ ವಿದ್ಯಾರ್ಥಿಗಳು ಈದ್ ಶುಭಾಶಯ ಕಾರ್ಡ್ ನೀಡುವುದರೊಂದಿಗೆ ಮಸ್ಜಿದ್ ಗೆ ಬಂದ ಎಲ್ಲರಿಗೂ ಸಿಹಿ ತಿಂಡಿ ವಿತರಿಸಿದರು.

Exit mobile version