Site icon Suddi Belthangady

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂನ್ 15ರಂದು ಶಾಲಾ ಸಂಸತ್ತು ಚುನಾವಣೆಯನ್ನು ನಡೆಸಲಾಯಿತು.

ಚುನಾವಣೆಯ ವಿವಿಧ ಹಂತಗಳಾದ ನಾಮಪತ್ರ ಸಲ್ಲಿಕೆ, ನಾಮಪತ್ರ ಹಿಂಪಡೆಯುವಿಕೆ ನಾಮಪತ್ರ ಪರಿಶೀಲನೆಗಳನ್ನು ಕ್ರಮಪ್ರಕಾರವಾಗಿ ನಡೆಸಲಾಯಿತು. ಮೊಬೈಲ್ ಆಧಾರಿತ ಇವಿಎಂ ಯಂತ್ರವನ್ನು ಬಳಸಿ ಮತದಾನವನ್ನು ನಡೆಸಿ ಮಕ್ಕಳಿಗೆ ಮತದಾನದ ಪರಿಕಲ್ಪನೆಯನ್ನು ಮೂಡಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ವಂ.ಫಾ.ಕ್ಲಿಫರ್ಡ್ ಪಿಂಟೋರವರು ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ, ಮತದಾನ ಮಾಡುವ ಕ್ರಮ ಹಾಗೂ ಶಾಲಾ ನಾಯಕ, ಉಪನಾಯಕ ಸ್ಥಾನಕ್ಕೆ ಸ್ಪರ್ಧಿಸಿದ ವಿದ್ಯಾರ್ಥಿಗಳಿಗೆ ತಮ್ಮ ಜವಾಬ್ದಾರಿಗಳನ್ನು ತಿಳಿಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರು ಶಿಕ್ಷಕವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಮತದಾನ ಮಾಡಿದರು. ಶಾಲಾ ನಾಯಕಿಯಾಗಿ ವೈಷ್ಣವಿ (10ನೇ), ಶಾಲಾ ಉಪನಾಯಕನಾಗಿ ಆಲ್ಸ್ಟನ್ ಡಿಸಿಲ್ವ (9ನೇ) ಹಾಗೂ ಪ್ರಾಥಮಿಕ ವಿಭಾಗದ ಉಪನಾಯಕನಾಗಿ ಸ್ಪಂದನ್ ವಿ ಜೆ (7ನೇ) ಆಯ್ಕೆಯಾದರು.

ಚುನಾವಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಶಾಲಾ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದ ಸಹಕರಿಸಿದರು.

Exit mobile version