Site icon Suddi Belthangady

ಹದಗೆಟ್ಟ ಶಿಶಿಲ-ಅರಸಿನಮಕ್ಕಿ ರಸ್ತೆ: ಶ್ರಮದಾನದ ಮೂಲಕ ದುರಸ್ತಿಗೆ ಗ್ರಾಮಸ್ಥರ ನಿರ್ಧಾರ

ಶಿಶಿಲ: ಅರಸಿನಮಕ್ಕಿ ರಸ್ತೆಯ ಇಕ್ಕೆಲಗಳಲ್ಲಿ ಪೊದೆಗಳು ಬೆಳೆದು ಹೊಂಡ ಗುಂಡಿಗಳಿಂದ ಕೂಡಿದ್ದು ತೀರಾ ಹದಗೆಟ್ಟಿದ್ದು, ಇದರಿಂದ ರೋಸಿಹೋದ ಗ್ರಾಮಸ್ಥರು ಪಕ್ಷ ಬೇಧ ಮರೆತು ಎಲ್ಲಾ ಸಂಘಟನೆಗಳು ಜೊತೆಯಾಗಿ ಜೂ.21ರ ಶುಕ್ರವಾರದಂದು ರಸ್ತೆಯ ಇಕ್ಕಿಲಗಳ ಪೊದೆಗಳನ್ನು ಕಡಿದು ರಸ್ತೆ ಗುಂಡಿಗಳಿಗೆ ಕಲ್ಲುಗಳನ್ನು ಹಾಕಿ ಶ್ರಮದಾನದ ಮೂಲಕ ದುರಸ್ತಿ ಮಾಡುವುದೆಂದು ನಿರ್ಧರಿಸಿದ್ದಾರೆ.

ಗ್ರಾಮದ ಎಲ್ಲಾ ಗ್ರಾಮಸ್ಥರು ತಮ್ಮಲ್ಲಿರುವ ಸಲಕರಣೆಗಳೊಂದಿಗೆ ಶ್ರಮದಾನದಲ್ಲಿ ಪಾಲ್ಗೊಳ್ಳಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

Exit mobile version