ಗೇರುಕಟ್ಟೆ: ಪರಪ್ಪು ಮುಹಿಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಖತೀಬರಾದ ಬಹು ಮಹಮ್ಮದ್ ಮಿಸ್ಬಾಹಿ ಅಲ್ ಫುರ್ಖಾನಿ ನೇತೃತ್ವದಲ್ಲಿ ಈದ್ ನಮಾಝ್ ನಿರ್ವಹಿಸಿ ಶಾಂತಿ ಸೌಹಾರ್ಧತೆಯ ಬಗ್ಗೆ ಸಂದೇಶ ನೀಡಿದರು.
ನಂತರ ಪರಪ್ಪು ದರ್ಗಾದಲ್ಲಿ ಸಾಮೂಹಿಕ ಝಿಯಾರತ್ ನೆರವೇರಿಸಿದರು.
ಅಧ್ಯಕ್ಷ ಅಬೂಬಕ್ಕರ್ ಹಾಜಿ, ಸದರ್ ಉಸ್ತಾದರಾದ ಅಬೂಬಕ್ಕರ್ ಸಿದ್ದೀಕ್ ಮುಈ ನಿ, ಅಬ್ಬಾಸ್ ಹಿಶಮಿ, ಮುಹಮ್ಮದ್ ಹನೀಫ್ ಮಿಸ್ಬಾಹಿ, ಜಮಾಆತನ ಹಿರಿಯರಾದ ಅಬ್ದುಲ್ಲ ಕುಂಞ ದಾರಿಮಿ, ಪ್ರದಾನ ಕಾರ್ಯದರ್ಶಿ ಅಬ್ದುಲ್ ಕರೀಮ್, ಆಡಳಿತ ಸಮಿತಿಯ ಉಪಾದ್ಯಕ್ಷರುಗಳು, ಪದಾಧಿಕಾರಿಗಳು, ಸ್ವಲಾತ್, ಕೆ.ಎಮ್.ಜೆ., ಎಸ್.ವೈ.ಎಸ್, ಎಸ್.ಎಸ್.ಎಫ್ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಜಮಾಅತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.