ಮೂಡುಕೋಡಿ: ಉಂಬೆಟ್ಟು ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಪಡ್ಯಾರಬೆಟ್ಟ ಕ್ಷೇತ್ರದ ವತಿಯಿಂದ ಉಚಿತ ಬರವಣಿಗೆ ಪುಸ್ತಕಗಳನ್ನು ವಿತರಿಸಲಾಯಿತು.
ಧರ್ಮದರ್ಶಿ ಜೀವಂದರ ಕುಮಾರ್ ಜೈನ್ ಪುಸ್ತಕಗಳನ್ನು ವಿತರಿಸಿ ಸರಕಾರಿ ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸುವ ಹಾಗೂ ಉಳಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಹಲವು ವರ್ಷಗಳಿಂದ ತಾಲೂಕಿನ ವಿವಿಧ ಶಾಲೆಗಳಿಗೆ ವಿತರಿಸುತ್ತಿದ್ದು ಇಲ್ಲಿ ಪ್ರಥಮ ಬಾರಿಗೆ ವಿತರಿಸಿದ್ದೇವೆ.
ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ತಂದೆ ತಾಯಿ ಹಾಗೂ ಸಮಾಜಕ್ಕೆ ಒಳ್ಳೆಯ ಹೆಸರು ತಂದು ಕೊಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಧನಂಜಯ ಕುಮಾರ್ ಜೈನ್, ಉಪಾಧ್ಯಕ್ಷೆ ಚೇತನಾ, ಸದಸ್ಯರುಗಳಾದ ಸದಾನಂದ ಪೂಜಾರಿ, ಯಶೋಧರ ಪೂಜಾರಿ, ಗೀತಾ, ವನಿತಾ, ವನಿತಾ, ಕುಸುಮ, ಪೋಷಕರು ಶಾಲಾ ಶಿಕ್ಷಕ ವೃಂದದವರು ಹಾಜರಿದ್ದರು.
ಜೆಸಿಂತಾ ಬ್ರಾಗ್ಸ್ ಸ್ವಾಗತಿಸಿ, ರೇಷ್ಮಾ ಆರ್ ವಂದಿಸಿದರು. ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸುನಂದಾ ಕಾರ್ಯಕ್ರಮ ನಿರೂಪಿದರು.