ಬೆದ್ರಬೆಟ್ಟು: ಅರಿಫಾಯ್ಯಾ ಜುಮಾ ಮಸೀದಿ ಬೆದ್ರಬೆಟ್ಟುವಿನಲ್ಲಿ ಸಂಭ್ರಮದ ಬಕ್ರೀದ್ ಆಚರಣೆ ನಡೆಯಿತು.
ಕಾರ್ಯಕ್ರಮದ ಮೊದಲಿಗೆ ಜಮಾತ್ ಧರ್ಮ ಗುರುಗಳಾದ ನೋಶಾದ್ ಸಖಾಫಿ ಅಲ್ ಅಫ್ಲಾಲಿ ಸ್ನೇಹ, ಶಾಂತಿ, ಸಮಾಧಾನ, ತ್ಯಾಗ, ಬಲಿದಾನ, ಪರಸ್ಪರ ಸಹಾಯದೊಂದಿಗೆ ಮಾನವ ಸೌಹಾರ್ದ ಹಾಗೂ ವಿಶ್ವ ಭ್ರಾತ್ರತ್ವದ ಮಹೋನ್ನತ ಸಂದೇಶಗಳನ್ನು ಸಾರುತ್ತಾ ಈದುಲ್ ಅಝ್ಹಾ (ಬಕ್ರಿದ್ ಹಬ್ಬ) ಅಖಂಡ ಜಗತ್ತಿನ ಕೋಟ್ಯಂತರ ಜನರಿಗೆ ಒಳಿತನ್ನು ನೀಡಲೀ ಹಾಗೂ ದೇಶದಾದ್ಯಂತ ಸಂಕಷ್ಟ, ನೋವು ಅನುವಭವಿಸುತಿರುವ ಎಲ್ಲಾ ಸಮಾಜದ ದುಖಿತರಿಗೆ ಅಲ್ಲಾಹನು ಶಾಂತಿ ಸಮಾದಾನವನ್ನು ನೀಡಲಿ ಪ್ರಾರ್ಥಿಸುತ್ತೇನೆ ಎಂದು ಬಕ್ರೀದ್ ಸಂದೇಶ ಭಾಷಣ ಮಾಡಿ ಬ ಈದುಲ್ ಅಝಾ ನಮಾಝ್ ಮಾಡಿ ಪ್ರಾರ್ಥನೆ ನೆರವೇರಿಸಿದರು.
ಹೊಸ ಬಟ್ಟೆ ಧರಿಸಿ ಬಂದಿದ್ದ ಹಿರಿಯರು, ಮಕ್ಕಳು ಪರಸ್ಪರ ಆಲಿಂಗನದ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು.
ರಿಫಾಯ್ಯಾ ಮಸೀದಿ ಆಡಳಿತ ಕಮಿಟಿ ಅಧ್ಯಕ್ಷರು ಸಲೀಂ ಬೆದ್ರಬೆಟ್ಟು ಮತ್ತು ಪದಾಧಿಕಾರಿಗಳು, ಮುರ್ಷಿದುಲ್ ಆನಾಂ ಯಂಗ್ ಮೆನ್ಸ್ ಪದಾಧಿಕಾರಿಗಳು ಮತ್ತು ಜಮಾತರು ಭಾಗಿಯಾಗಿದ್ದರು.