Site icon Suddi Belthangady

ಸಂತ ತೆರೇಸಾ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಕರ ಕಾರ್ಯಗಾರ

ಬೆಳ್ತಂಗಡಿ: ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರಿಗಾಗಿ ಕಾರ್ಯಗಾರವನ್ನು ಜೂ.15ರಂದು ಹಮ್ಮಿಕೊಳ್ಳಲಾಯಿತು.ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ವಂದನೀಯ ಭಗಿನಿ ಡಿಂಪಲ್ ಡಿಸೋಜ ರವರು ಆಗಮಿಸಿದ್ದು ಕಾರ್ಯಗಾರವನ್ನು ನಡೆಸಿಕೊಟ್ಟರು.

ಕಾರ್ಯಗಾರದಲ್ಲಿ ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ ವಿವಿಧ ವಿಷಯಗಳನ್ನು ಮಂಡಿಸಲಾಯಿತು. ಬಂದಿರುವ ಎಲ್ಲಾ ಅತಿಥಿಗಣ್ಯರನ್ನು ಕಾಲೇಜಿನ ಪ್ರಾಂಶುಪಾಲೆ ಭಗಿನಿ ಆರೋಗ್ಯರವರು ಸ್ವಾಗತಿಸಿದರು.

ವೇದಿಕೆಯಲ್ಲಿ ಸಂತ ತೆರೇಸಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಲೀನಾ ಡಿಸೋಜಾ, ಸಂತ ತೆರೇಸಾ ಕಾಲೇಜಿನ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾಕ್ಟರ್ ಹೆರಾಲ್ಡ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಾಣಿಜ್ಯ ವಿಭಾಗದ ಸಿಲ್ವಿಯಾರವರು ನಿರೂಪಿಸಿ ಪ್ರೌಢಶಾಲೆಯ ಕನ್ನಡ ವಿಭಾಗದ ಶಿಕ್ಷಕಿ ಉಮಾರವರು ಎಲ್ಲರನ್ನೂ ವಂದಿಸಿದರು. ಕಾರ್ಯಗಾರದಲ್ಲಿ ಸಂತ ತೆರೇಸಾ ಪ್ರೌಢಶಾಲೆ ಹಾಗೂ ಕಾಲೇಜಿನ ಎಲ್ಲಾ ಶಿಕ್ಷಕರುಹಾಗೂ ಉಪನ್ಯಾಸಕರು ಭಾಗವಹಿಸಿದ್ದರು.

Exit mobile version