Site icon Suddi Belthangady

ಎನ್.ಎಮ್.ಎಮ್.ಎಸ್ ಪರೀಕ್ಷೆ ರಾಜ್ಯಮಟ್ಟದ ವಿದ್ಯಾರ್ಥಿ ವೇತನಕ್ಕೆ ಓಡಿಲ್ನಾಳ ಶಾಲಾ ವಿದ್ಯಾರ್ಥಿಗಳು ಆಯ್ಕೆ

ಓಡಿಲ್ನಾಳ: 2023-24ನೇ ಸಾಲಿನ ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ರಾಜ್ಯಮಟ್ಟದ ವಿದ್ಯಾರ್ಥಿ ವೇತನಕ್ಕೆ ಓಡಿಲ್ನಾಳ ಶಾಲಾ ವಿದ್ಯಾರ್ಥಿಗಳಾದ ಶೀಲಾ ಜಯಾನಂದ ನಾಯಕ್ ಮೂಲೊಟ್ಟು ಇವರ ಪುತ್ರಿ ರಶ್ಮಿ ಹಾಗೂ ನೆಲ್ಲಿಗುಡ್ಡೆ ಸುಮತಿ ಗುರುವಪ್ಪ ನಾಯ್ಕ್ ಇವರ ಪುತ್ರ ಸುಜನ್ ಇವರು ಉತ್ತಮ ಅಂಕಗಳನ್ನು ಪಡೆದು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿರುತ್ತಾರೆ.

ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿ ವೇತನ ಪಡೆಯಲು ಶ್ರಮವಹಿಸಿದ ಶಿಕ್ಷಕ ವೃಂದಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ, ಎಸ್.ಡಿ.ಎಂ.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಸರ್ವ ಸದಸ್ಯರು, ಹಾಗೂ ಪೋಷಕರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.

Exit mobile version