Site icon Suddi Belthangady

ಬೆಳಾಲು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಸರ್ಕಾರಕ್ಕೆ ಚುನಾವಣೆ ಇವಿಎಂ ಬಳಕೆ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ 2024-25ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸರಕಾರ ರಚನೆಯ ಮತದಾನದ ಪ್ರಕ್ರಿಯೆಯು ಇ.ವಿ.ಎಂ. ಮೂಲಕ ನಡೆದು ವಿದ್ಯಾರ್ಥಿಗಳಿಗೆ ಚುನಾವಣೆಯ ಪ್ರಾಯೋಗಿಕ ಅನುಭವ ದೊರೆಯುವಂತಾಯಿತು.

ಮೊಬೈಲ್ ಮೂಲಕ ಬ್ಯಾಲೆಟ್ ಯೂನಿಟ್ಟನ್ನು ಸೆಟ್ ಮಾಡಿ ಚುನಾವಣಾ ಪ್ರಕ್ರಿಯೆಯನ್ನು ನಡಿಸಿಕೊಡಲಾಯಿತು.

ಶಿಕ್ಷಕಿ ರಾಜಶ್ರಿಯವರ ನೇತೃತ್ವದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯು ಶಾಲೆಯ ಎಲ್ಲಾ ಶಿಕ್ಷಕರೊಂದಿಗೆ ಯಶಸ್ವಿಯಾಗಿ ಜರಗಿತು. ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ಗೆದ್ದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.

Exit mobile version