Site icon Suddi Belthangady

ಕನ್ಯಾಡಿ-1: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಸಂಸತ್ ಚುನಾವಣೆ

ಕನ್ಯಾಡಿ-1: ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ 2024-25ನೇ ಸಾಲಿನ ಶಾಲಾ ಸಂಸತ್ ಚುನಾವಣೆ ನಡೆಯಿತು.

ಭವಿಷ್ಯಕ್ಕೆ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ದೃಷ್ಟಿಯಿಂದ ಚುನಾವಣಾ ಪ್ರಕ್ರಿಯೆಯನ್ನು ಮಕ್ಕಳಿಗೆ ಸ್ಪಷ್ಟವಾಗಿ ತಿಳಿಸುವ ಮೂಲಕ ನಿಜವಾದ ಚುನಾವಣಾ ಪ್ರಕ್ರಿಯೆಯಂತೆ ಚುನಾವಣೆ ನಡೆಸಲಾಯಿತು.

ಇವಿಎಂ ಯಂತ್ರದ ಮೂಲಕ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ, 50 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲಾ ನಾಯಕಿಯಾಗಿ 8ನೇ ತರಗತಿಯ ಕೀರ್ತಿ ಹಾಗೂ ಉಪನಾಯಕನಾಗಿ 8ನೇ ತರಗತಿಯ ರತೇಶ್ ಆಯ್ಕೆಯಾಗಿದ್ದಾರೆ.

ನೂತನ‌ವಾಗಿ ಶಾಲಾ ನಾಯಕಿ ಹಾಗೂ ಉಪನಾಯಕನಾಗಿ ಆಯ್ಕೆಯಾದ ಇಬ್ಬರಿಗೂ ಶಾಲಾ ಮುಖ್ಯೋಪಾಧ್ಯಾಯರು, ಅಧ್ಯಾಪಕ ವೃಂದ ಹಾಗೂ ಎಸ್ಡಿಎಂಸಿ ಅವರು ಅಭಿನಂದನೆಗಳನ್ನು ಸಲ್ಲಿಸಿದರು.

Exit mobile version