Site icon Suddi Belthangady

ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೋಷಕರ ಸಭೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಸಭೆ ಜೂ.14ರಂದು ನಡೆಯಿತು.

ಮುಖ್ಯ ಅತಿಥಿಗಳಾಗಿ ನಿರ್ದೇಶಕರು, ಶಿಶುವೈದ್ಯರು, ಕಲರವ ಮಕ್ಕಳ ಅಭಿವೃದ್ಧಿ ಕೇಂದ್ರ ಮಂಗಳೂರು ಡಾ.ಶಿಲ್ಪ ಹೆಗಡೆ ಇವರು ಆಗಮಿಸಿದ್ದರು.

ಹೆತ್ತವರು ವಿದ್ಯಾರ್ಥಿಗಳ ಜೊತೆಗೆ ಹೇಗೆ ಇರಬೇಕು, ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕವಾದ ವಾತಾವರವನ್ನು ಹೇಗೆ ಸೃಷ್ಟಿ ಮಾಡಬೇಕು.ಮಕ್ಕಳನ್ನು ಯಾರಿಗೂ ಹೋಲಿಸುವುದು ಬೇಡ.ಹೀಗೆ ಮಾಡಿದಾಗ ನಮ್ಮ ಮಕ್ಕಳ ಆತ್ಮವಿಶ್ವಾಸ ಕಡಿಮೆ ಆಗುತ್ತದೆ, ಎಂದು ಹತ್ತು ಹಲವಾರು ಉದಾಹರಣೆಗಳ ಮುಖಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಅನೇಕ ವಿಚಾರಗಳನ್ನು ತಿಳಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಸುನಿಲ್ ಪಿ.ಜೆ ಹದಿ ಹರೆಯದಲ್ಲಿ ಮಕ್ಕಳ ಜೊತೆ ಹೇಗಿರಬೇಕು, ಹೆತ್ತವರ ಜವಾಬ್ದಾರಿ ಆಯಾ ಸಂದರ್ಭದಲ್ಲಿ ಏನು, ಮೊಬೈಲ್ ಮಾಯಾ ಲೋಕಕ್ಕೆ ಒಳಬೀಳದ ಹಾಗೆ ಕಾಪಾಡಿ, ಮಕ್ಕಳನ್ನು ಜನರ ಜೊತೆ ಬೆರೆಯಲು ಬಿಡಿ ಎಂಬಿತ್ಯಾದಿ ವಿಚಾರಗಳನ್ನು ತಿಳಿಸಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಪರಿಮಳ ಎಂ.ವಿ ಶಾಲೆಯ ಆಗುಹೋಗುಗಳನ್ನು ಹೆತ್ತವರ ಕರ್ತವ್ಯವನ್ನು ವಿವರಿಸಿದರು.ತದನಂತರ ಶಿಕ್ಷಕರು ಹೆತ್ತವರಿಗೆ ತಮ್ಮ ಪರಿಚಯವನ್ನು ತಿಳಿಸಿದರು. ಕೆ.ಜಿ ಹಂತ ಪ್ರಾಥಮಿಕ ಹಂತ ಹಾಗೂ ಪ್ರೌಢ ಶಾಲಾ ಹಂತ ಹೀಗೆ ಮೂರು ಹಂತಗಳಲ್ಲಿ ಪೋಷಕರ ಸಭೆ ನಡೆಯಿತು.

Exit mobile version