Site icon Suddi Belthangady

ಪೋಕ್ಸೋ ಪ್ರಕರಣ: ಬಿಜೆಪಿ ಮುಖಂಡ ರಾಜೇಶ್ ಎಂ.ಕೆ. ಸಹಿತ ಈರ್ವರಿಗೆ ನಿರೀಕ್ಷಣಾ ಜಾಮೀನು

ಬೆಳ್ತಂಗಡಿ: ಬಿಜೆಪಿ ಬೆಳ್ತಂಗಡಿ ತಾಲೂಕು ಎಸ್.ಟಿ. ಮೋರ್ಚಾದ ಅಧ್ಯಕ್ಷ ರಾಜೇಶ್ ಎಂ.ಕೆ. ಸಹಿತ ಈರ್ವರಿಗೆ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಕಳೆಂಜದಲ್ಲಿರುವ ತನ್ನ ಅಡಿಕೆ ಅಂಗಡಿ ಬಂದ್ ಮಾಡಿ ಮನೆಗೆ ಹೊರಡುವ ವೇಳೆ ಬಿಜೆಪಿ ಮುಖಂಡ ರಾಜೇಶ್ ಎಂ.ಕೆ.ಅವರಿಗೆ ಕಾಂಗ್ರೆಸ್ ಮುಖಂಡ ಕುಶಾಲಪ್ಪ ಗೌಡ ಎಂಬವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಬಳಿಕ ಉಜಿರೆ ಬೆನಕ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್ ಅವರನ್ನು ಮಂಗಳೂರು ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾಜೇಶ್ ಎಂ.ಕೆ.ಅವರ ಕೊಲೆ ಯತ್ನ ಪ್ರಯತ್ನ ನಡೆದ ಬೆನ್ನಿಗೇ ರಾಜೇಶ್ ಮತ್ತು ಅಭಿ ಯಾನೆ ಮೋಹನ್ ಎಂಬವರ ವಿರುದ್ಧ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.‌

ಬಂಧನ ಭೀತಿಯಲ್ಲಿದ್ದ ರಾಜೇಶ್ ಎಂ.ಕೆ.‌ ಮತ್ತು ಅಭಿ ಯಾನೆ ಮೋಹನ್‌ ಅವರಿಗೆ ಜೂನ್ 14ರಂದು ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ಖ್ಯಾತ ವಕೀಲ ಶಂಭು ಶರ್ಮ ವಾದಿಸಿದ್ದರು.‌ ರಾಜೇಶ್ ಅವರ ಕೊಲೆಗೆ ಯತ್ನಿಸಿದ ಆರೋಪದಡಿ ಬಂಧಿತರಾಗಿರುವ ಕುಶಾಲಪ್ಪ ಗೌಡ ನ್ಯಾಯಾಂಗ ಬಂಧನದಲ್ಲಿದ್ದಾನೆ.

Exit mobile version