Site icon Suddi Belthangady

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಣಿಸಿಕೊಂಡ ಕಾಡಾನೆ

ಚಾರ್ಮಾಡಿ: ಒಂಟಿ ಸಲಗದ ಚಾರ್ಮಾಡಿ ಘಾಟಿಯ ನಂಟು ಮುಂದುವರೆದಿದೆ ಇಂದು (ಜೂ.14) ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ರಸ್ತೆ ಬದಿ ಮತ್ತೆ ಸಲಗ ಕಂಡುಬಂದಿದೆ.

ಘಾಟಿಯ ಮೂರನೇ ತಿರುವಿನ ರಸ್ತೆ ಬದಿ ಇರುವ ಅರಣ್ಯ ಇಲಾಖೆಯ ಔಷಧ ಸಸ್ಯಗಳ ಸಂರಕ್ಷಣಾ ವನದ ಗೇಟಿನ ಮುಂಭಾಗ ಆನೆ ಕಂಡು ಬಂದಿದೆ.ಆನೆ ಸುಮಾರು ಒಂದು ತಾಸಿಗಿಂತ ಅಧಿಕಕಾಲ ಈ ಸ್ಥಳದಲ್ಲಿ ಮಲಗಿತ್ತು. ಆನೆ ಗೇಟ್ ಮುರಿದು ಬರುವ ಸಾಧ್ಯತೆ ಇದ್ದ ಕಾರಣ ವಾಹನ ಸವಾರರು ಭೀತಿಗೊಳಗಾದರು.

ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಆನೆಯನ್ನು ಅರಣ್ಯದತ್ತ ಓಡಿಸಿದ್ದಾರೆ.ಜೂ.12ರ ರಾತ್ರಿ ಏಳು ಹಾಗೂ ಎಂಟನೇ ತಿರುವಿನ ಮಧ್ಯೆ ಕಾಡಾನೆ ಸರಕಾರಿ ಬಸ್ ಗೆ ಅಡ್ಡ ನಿಂತ ಕಾರಣ ಅರ್ಧ ತಾಸಿಗಿಂತ ಅಧಿಕ ಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು ಇದೀಗ ಇಂದು ಇಲ್ಲಿಂದ ಸುಮಾರು 4 ಕಿ.ಮೀ ಕೆಳಭಾಗದಲ್ಲಿ ಕಾಡಾನೆ ಕಂಡು ಬಂದಿದೆ.

ಕಳೆದ ಎರಡು ತಿಂಗಳಿಂದ ಘಾಟಿಯಲ್ಲಿ ಹಗಲು-ರಾತ್ರಿ ಕಾಡಾನೆ ಸಂಚಾರ ನಡೆಸುತ್ತಿರುವುದು ಮಾಮೂಲಾಗಿದೆ.

Exit mobile version