ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಮುಂಗಾರು ಮತ್ತು ಹಿಂಗಾರಿನ 500 ಎಕ್ರೆ ಯಂತ್ರಶ್ರೀ ನಾಟಿಗೆ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ ರವರು ಚಾಲನೆಯನ್ನು ನೀಡಿದರು.
ಒಂದು ಕಾಲದಲ್ಲಿ ಭತ್ತ ಕೃಷಿಯನ್ನು ಹೊರತುಪಡಿಸಿ ಯಾವುದೇ ಕೃಷಿಯನ್ನು ಮಾಡದೆ, ಪ್ರತಿಯೊಬ್ಬ ರೈತನು ಕೂಡ ಭತ್ತ ಕೃಷಿಯನ್ನು ಮಾಡಿ ತನ್ನ ಜೀವನವನ್ನು ನಡೆಸುತ್ತಿದ್ದು ಇಂದು ಹೆಚ್ಚಿನ ರೈತರು ವಾಣಿಜ್ಯ ಕೃಷಿ ಅಡಿಕೆ, ರಬ್ಬರ್ ಇನ್ನಿತರ ಏಕಮುಖ ಬೆಲೆಯನ್ನು ಮಾಡುತ್ತಿದ್ದು ವರ್ಷದಿಂದ ವರ್ಷಕ್ಕೆ ಭತ್ತ ಕೃಷಿಕರ ಸಂಖ್ಯೆ ಕಡಿಮೆಯಾಗಿ ಭತ್ತದ ಗದ್ದೆಯು ಕೂಡ ಇಂದು ಅಡಿಕೆ ತೋಟವಾಗಿ ಪರಿವರ್ತನೆಗೊಳ್ಳುತ್ತಿದ್ದು, ಇದನ್ನು ಅರಿತುಕೊಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭತ್ತ ಕೃಷಿಯನ್ನು ಉಳಿಸಬೇಕು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕು ಎನ್ನುವ ಭಾವನೆಯೊಂದಿಗೆ ಕೂಲಿ ಆಳುಗಳ ಸಮಸ್ಯೆಯಿಂದ ಭತ್ತ ಕೃಷಿಯರು ಭತ್ತ ಕೃಷಿ ಮಾಡುವುದನ್ನು ಕಡಿಮೆ ಮಾಡುತ್ತಿದ್ದು, ಇದಕ್ಕೆ ಪೂರಕವಾಗಿ ಯಾಂತ್ರಿಕೃತ ಭತ್ತ ಬೇಸಾಯವನ್ನು ಮಾಡಿದಾಗ ಹೆಚ್ಚಿನ ರೈತರು ಬೀಜದಿಂದ ಬೀಜದವರೆಗೆ ಯಂತ್ರದ ಮೂಲಕವಾಗಿ ನಾಟಿಯನ್ನು ಮಾಡಿ, ಭತ್ತ ಕೃಷಿಯನ್ನು ಉಳಿಸಲು ಸಾಧ್ಯವಿದೆ ಎನ್ನುವ ಚಿಂತನೆಯೊಂದಿಗೆ, ಸರಕಾರದ ಸಹಯೋಗದೊಂದಿಗೆ ಕೃಷಿ ಯಂತ್ರಧಾರೆಯನ್ನು ಪ್ರಾರಂಭಿಸಿದ್ದು ಸುಮಾರು 10 ವರ್ಷಗಳಿಂದ ನಿರಂತರವಾಗಿ ಭತ್ತ ಬೇಸಾಯಕ್ಕೆ ಪ್ರೋತ್ಸಾಹವನ್ನು ನೀಡಿದ್ದು, ಇದರಿಂದ ಕೂಲಿ ಆಳುಗಳ ಸಮಸ್ಯೆಯೇ ಇಲ್ಲದೆ ನಿಗದಿತ ಸಮಯದಲ್ಲಿ ನಾಟಿಯನ್ನು ಮಾಡಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯವನ್ನು ಇಂದು ಭತ್ತ ಕೃಷಿಕರು ಈ ಯಂತ್ರಶ್ರೀ ಕಾರ್ಯಕ್ರಮದಿಂದ ಪಡೆಯುತ್ತಿದ್ದು, ಯಂತ್ರಶ್ರೀ ಯೋಜನೆಯ ಮೂಲಕವಾಗಿ ತಾಲೂಕಿನಲ್ಲಿ 500 ಎಕ್ರೆ ಪ್ರದೇಶಗಳಲ್ಲಿ ಮುಂಗಾರಿಗೆ ಯಂತ್ರಶ್ರೀ ಅಂದರೆ ಯಂತ್ರದ ಮೂಲಕ ಭತ್ತನಾಟಿ ಮಾಡಲು ಇದೀಗಾಗಲೇ ರೈತರು ತಯಾರಿಯನ್ನು ಮಾಡಿಕೊಂಡಿದ್ದಾರೆ.
ಯಾಂತ್ರಿಕೃತ ಭತ್ತ ಬೇಸಾಯ ಮಾಡುವ ರೈತರಿಗೆ ಮನೆ ಬಾಗಿಲಿಗೆ ಭೇಟಿ ನೀಡಿ ಸಂಪೂರ್ಣವಾದ ಪ್ರಾತ್ಯಕ್ಷಿತ ಮಾಹಿತಿ, ಯಂತ್ರದ ಮೂಲಕ ಭತ್ತ ಬೇಸಾಯ ಮಾಡುವುದಾದರೆ ತಾಲೂಕಿನಲ್ಲಿ ಒಬ್ಬರು ಯೋಜನೆಯ ವತಿಯಿಂದ ಕೃಷಿ ಮೇಲ್ವಿಚಾರಕರಿದ್ದು ಇವರು ಯಂತ್ರಶ್ರೀ ಮಾಡುವ ರೈತರ ಮನೆಯ ಭೇಟಿಯನ್ನು ಮಾಡಿ ಬೀಜದ ಆಯ್ಕೆ, ಭತ್ತದ ಬೀಜೊಪಚಾರ, ಸಸಿ ಮಡಿ ತಯಾರಿ, ಯಂತ್ರದ ಮೂಲಕ ನಾಟಿ, ಗೊಬ್ಬರ ನೀಡುವಿಕೆ ಮತ್ತು ರೋಗ, ಕೀಟಗಳ ಹಾಗೂ ಹುಳದಬಾದೆ ನಿಯಂತ್ರಣದ ಬಗ್ಗೆ ಸಕಾಲದಲ್ಲಿ ರೈತರ ಮನೆ ಬಾಗಿಲಿಗೆ ಭೇಟಿ ನೀಡಿ ಮಾಹಿತಿಯನ್ನು ಯೋಜನಾಧಿಕಾರಿ ಸುರೇಂದ್ರ ಬೆಳ್ತಂಗಡಿ ಉಚಿತವಾಗಿ ನೀಡುತ್ತಾರೆ.
ಟ್ರೇ ಮೂಲಕ ಸಸಿ ಮಡಿ ತಯಾರಿ: ಒಂದು ಎಕ್ರೆಗೆ 70ರಿಂದ 80 ಟ್ರೇ ಬೇಕಾಗುತ್ತದೆ, ಮೊದಲಾಗಿ ಯೋಗ್ಯವಾದ ಭತ್ತದ ಬೀಜವನ್ನು ಆಯ್ಕೆ ಮಾಡಿಕೊಂಡು, ಬಿಜೋಪಚಾರವನ್ನು ಮಾಡಿ ಮೊಳಕೆಯನ್ನು ಬರಿಸಿ,ಜರಡಿಯ ಮೂಲಕವಾಗಿ ಮಣ್ಣನ್ನು ಸಂಗ್ರಹಿಸಿ, ಕಲ್ಲು ಇಲ್ಲದ ಮಣ್ಣನ್ನು ಟ್ರೇಗೆ ಜೋಡಣೆ ಮಾಡಿ ಬೀಜವನ್ನು ಹಾಕಿ, ದಿನಕ್ಕೆ ಮೂರು ಬಾರಿ ಮಳೆ ಇಲ್ಲದೆ ಇರುವ ಸಂದರ್ಭದಲ್ಲಿ ನೀರನ್ನು ಸೋಸ್ ಕ್ಯಾನ್ ಮೂಲಕ ಹಾಕಿ, 18 ರಿಂದ 20 ದಿನದಲ್ಲಿ ನಾಟಿಗೆ ಯೋಗ್ಯವಾದ ಸಸಿಮಡಿಗೆ ತಯಾರಾಗುತ್ತದೆ, 8 ಸಾಲು ಮತ್ತು 4 ಸಾಲಿನ ಯಂತ್ರಗಳ ಮೂಲಕವಾಗಿ ನಾಟಿ ಮಾಡುತ್ತಿದ್ದು,ಆಯಗದ್ದೆಯಾ ಎಕ್ರೆಗಳನ್ನು ನೋಡಿಕೊಂಡು ಯಂತ್ರದ ಮೂಲಕ ನಾಟಿ ಮಾಡಬಹುದಾಗಿದೆ, ಟೆಂಪರರಿ ಟ್ರೇ ಸಿ ಎಚ್ ಎಸ್ ಸಿ ಕೇಂದ್ರ ಬೆಳ್ತಂಗಡಿಯಲ್ಲಿ ಸಿಗುತ್ತಿದ್ದು ಒಂದು ಟ್ರೇಗೆ 15 ರೂಪಾಯಿ ಮೊತ್ತವನ್ನು ಪಾವತಿಸಬೇಕು,ಇದರಲ್ಲಿ ಮೂರು ಅಥವಾ 4 ಬೆಳೆಯನ್ನು ತೆಗೆಯಬಹುದಾಗಿದೆ, ಪರ್ಮನೆಂಟ್ ಟ್ರೇ ಕೂಡ ಒದಗಿಸಿಕೊಡಲಾಗುವುದು ಎಂದು ತಾಲೂಕು ಕೃಷಿ ಅಧಿಕಾರಿ ರಾಮ್ ಕುಮಾರ್ ತಿಳಿಸಿದರು.
ಯಂತ್ರಶ್ರೀ ಯೋಧರ ಆಯ್ಕೆ: ರೈತರಿಗೆ ಅದೇ ಗ್ರಾಮದಲ್ಲಿ ಸಕಾಲದಲ್ಲಿ ಮಾಹಿತಿಯನ್ನು ನೀಡಲು, ಅದೇ ಗ್ರಾಮದಲ್ಲಿ ಒಬ್ಬ ಅತ್ಯುತ್ತಮ ಭತ್ತ ಕೃಷಿಕರನ್ನು ಯಂತ್ರಶ್ರೀ ಯೋಧರಾಗಿ ಆಯ್ಕೆ ಮಾಡಿದ್ದು ಇವರು ಯಾವುದೇ ಸಂದರ್ಭದಲ್ಲಿ ರೈತನ ಮನೆ ಬಾಗಿಲಿಗೆ ಬಂದು ಮಾಹಿತಿಯನ್ನು ನೀಡಲು ಸಿದ್ಧವಾಗಿದ್ದಾರೆ, ತಾಲೂಕಿನಲ್ಲಿ ಇದೀಗಾಗಲೇ 10 ಜನ ಯಂತ್ರಶ್ರೀ ಯೋಧರು ತನ್ನ ಸೇವೆಯನ್ನು ನೀಡುತ್ತಿದ್ದಾರೆ
ಇಲಾಖೆಯ ಸಹಕಾರ: ರೈತರಿಗೆ ಸಬ್ಸಿಡಿ ದರದಲ್ಲಿ ಭತ್ತದ ಬೀಜ, ಮಣ್ಣಿನಲ್ಲಿ ಪಿಎಚ್ ರಸಸಾರ ಕಡಿಮೆ ಇರುವ ಗದ್ದೆಗಳಿಗೆ ಸುಣ್ಣ, ಹಸಿರೆಲೆ ಗೊಬ್ಬರ ಹಾಗೂ ಕೀಟನಾಶಕಗಳನ್ನು ರೈತರಿಗೆ ಸಕಾಲದಲ್ಲಿ ನೀಡುತ್ತಿದ್ದು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರ ರಂಜಿತ್ ರವರನ್ನು ನಮ್ಮ ಮೂಲಕನೇ ಸಂಪರ್ಕಿಸಿ, ಇಲಾಖೆಯ ಉತ್ತಮ ಸ್ಪಂದನೆಗಳೊಂದಿಗೆ ರೈತರಿಗೆ ಮಾಹಿತಿಯನ್ನು ನೀಡಲಾಗುತ್ತಿದೆ.
ಯೋಜನೆಯಲ್ಲೊಂದು ಯಂತ್ರಶ್ರೀ ಬ್ಯಾಂಕ್: ಕೃಷಿ ಪ್ರಾದೇಶಿಕ ಕೇಂದ್ರ ಕಚೇರಿ ಧರ್ಮಸ್ಥಳದಿಂದ ಇಡೀ ರಾಜ್ಯಕ್ಕೆ ಪೂರಕವಾಗಿ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಹಾಗೂ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್, ಕೃಷಿ ಯೋಜನಾಧಿಕಾರಿಗಳಾದ ಸುಧೀರ್ ಜೈನ್ ಹಾಗೂ ಜಯಾನಂದರವರು ಸಕಾಲದಲ್ಲಿ ತಾಂತ್ರಿಕ ಮಾಹಿತಿಯನ್ನು ರೈತರಿಗೆ ಒದಗಿಸುತ್ತಿದ್ದಾರೆ, ರೈತರಿಗೆ ಯಾಂತ್ರಿಕೃತ ಭತ್ತ ಬೇಸಾಯ ತಾಂತ್ರಿಕ ಮಾಹಿತಿಗೆ ಕೃಷಿ ಅಧಿಕಾರಿ ರಾಮ್ ಕುಮಾರ್ ಇವರನ್ನು ಸಂಪರ್ಕಿಸಬಹುದು, ಇವರು ರೈತರ ಮನೆ ಬಾಗಿಲಿಗೆ ಬಂದು ಮಾಹಿತಿಯನ್ನು ನೀಡುತ್ತಾರೆ ಯಾವುದೇ ವೆಚ್ಚಗಳನ್ನು ನೀಡಬೇಕಾಗಿಲ್ಲ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8660891480
ಯಂತ್ರಶ್ರೀ ನರ್ಸರಿ: ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿಮಡಿಯನ್ನು ತಯಾರಿಸಲು ಕಷ್ಟವಾಗುತ್ತಿರುವ ರೈತರಿಗೆ ಸಹಕಾರವಾಗುವಂತೆ ಬೆಳ್ತಂಗಡಿಯ ಮಲೆಬೆಟ್ಟಿನ ಪ್ರಗತಿಪರ ಭತ್ತ ಕೃಷಿಕ ಪ್ರವೀಣ್(9482340154)ರವರು ಯಂತ್ರಶ್ರೀ ಸಸಿಮಡಿಯನ್ನು ತಯಾರಿಸಿ ರೈತರಿಗೆ ಕಡಿಮೆ ದರದಲ್ಲಿ ನೀಡುತ್ತಿರುವುದು ಇವರನ್ನು ಸಂಪರ್ಕಿಸಬಹುದಾಗಿದೆ.
ಭತ್ತಕ್ಕೆ ಸುಲಭದಲ್ಲಿ ಬೆಳೆ ವಿಮೆ: ಯೋಜನೆಯ CSC ಕೇಂದ್ರದ ಮೂಲಕವಾಗಿ ಭತ್ತಕ್ಕೆ ಬೆಳೆಯ ವಿಮೆಯನ್ನು ಮಾಡುತ್ತಿದ್ದು,ಆಯ ಗ್ರಾಮದಲ್ಲಿ ಯೋಜನೆಯ ವತಿಯಿಂದ CSC ಕೇಂದ್ರವಿದ್ದು ಈ ಕೇಂದ್ರವನ್ನು ರೈತರು ಸಂಪರ್ಕಿಸಬಹುದಾಗಿದೆ,ಒಂದು ಎಕ್ರೆಗೆ 755/-ಮೊತ್ತದ ಬೆಳೆ ವಿಮೆಯನ್ನು ರೈತರು ಪಾವತಿಸಿದ್ದಲ್ಲಿ, ಯಾವುದೇ ಪ್ರಾಕೃತಿಕ ವಿಕೋಪ ಹಾಗೂ ಹವಮಾನ ವೈಪರಿತ್ಯದಿಂದಾಗಿ ನಷ್ಟವನ್ನು ಅನುಭವಿಸಿದಾಗ ಬೆಳೆ ವಿಮೆಯಿಂದ ಪರಿಹಾರವನ್ನು ಪಡೆದುಕೊಳ್ಳಬಹುದು.(ಹೆಚ್ಚಿನ ಮಾಹಿತಿಗೆ ತಾಲೂಕಿನ CSC ನೋಡೆಲ್ ಅಧಿಕಾರಿ ದೀಕ್ಷಿತ್ ರವರನ್ನು ಸಂಪರ್ಕಿಸಬಹುದು: 9916580695)
ಟ್ರ್ಯಾಕ್ಟರ್ ನ ಮೂಲಕ ಉಳುಮೆ ಮತ್ತು ನಾಟಿ ಯಂತ್ರದ ಮೂಲಕವಾಗಿ ನಾಟಿ ಮಾಡಿದಾಗ ರೈತರಿಗೆ GST ಬಿಲ್: ರೈತರು ಬೆಳೆಯಲ್ಲಿ ಯಾವುದೇ ನಷ್ಟವನ್ನು ಅನುಭವಿಸಿದಾಗ ರೈತ ತಾನು ಭತ್ತ ಕೃಷಿಯನ್ನು ಮಾಡಿದ ಆಧಾರಕ್ಕಾಗಿ ಆ ವರ್ಷದ ದಿನಾಂಕ ನಮೂದನೆಯಾಗಿ ಇಲಾಖೆಯಿಂದ ಭತ್ತದಬೀಜ ತಂದಾಗ ಇಲಾಖೆಯ ಬಿಲ್, ಕೃಷಿ ಯಂತ್ರಧಾರೆಯ ಮೂಲಕವಾಗಿ ಉಳುಮೆ ಮಾಡಿದಾಗ ಹಾಗೂ ನಾಟಿ ಮಾಡಿದಾಗ ರೈತರಿಗೆ ಕೃಷಿ ಯಂತ್ರಧಾರೆಯ ಮೂಲಕವಾಗಿ ಜಿಎಸ್‌ಟಿ ನಮೂದನೆಯಾಗಿರುವ ಟ್ಯಾಕ್ಸ್ ಇನ್ವಾಯ್ಸ್ ರೈತನ ಹೆಸರನ್ನು ನಮೂದಿಸಿ ನೀಡಲಾಗುವುದು, ಇದು ಬೆಳೆ ವಿಮೆ ಪಡೆಯುವ ಸಂದರ್ಭದಲ್ಲಿ ರೈತರಿಗೆ ಆಧಾರವಾಗುತ್ತದೆ.ಟ್ಯಾಕ್ಟರ್ ಮತ್ತು ನಾಟಿಯಂತ್ರದ ಬುಕ್ಕಿಂಗ್ ಮಾಡಲು ಕೃಷಿ ಯಂತ್ರಧಾರೆಯ ಪ್ರಬಂಧಕ ಸಚಿನ್ ರವರನ್ನು ಸಂಪರ್ಕಿಸಬಹುದು: 9986623723
ಈ ಕಾರ್ಯಕ್ರಮದಲ್ಲಿ ಹಡಿಲು ಭೂಮಿಯಲ್ಲಿ ಭತ್ತ ಕೃಷಿಯನ್ನು ಮಾಡುತ್ತಿರುವ ಡಾಕ್ಟರ್ ಹರ್ಷ, ಮನೆಯ ಯಜಮಾನ ಫ್ರಾನ್ಸಿಸ್ ಮಿರಂದ, CHSC ಮ್ಯಾನೇಜರ್ ಸಚಿನ್, ನಾಟಿ ಡ್ರೈವರ್ ಜಗದೀಶ್, ಮೇಲ್ವಿಚಾರಕ ಸುಶಾಂತ್, ಕೃಷಿ ಅಧಿಕಾರಿ ರಾಮ್ ಕುಮಾರ್ ಹಾಗೂ ಭತ್ತ ಕೃಷಿಕರು ಉಪಸ್ಥಿತರಿದ್ದರು.