ಪೆರಿಂಜೆ: ಶ್ರೀ ಧ.ಮ.ಅನುದಾನಿತ ಪ್ರೌಢಶಾಲೆಯಲ್ಲಿ ಯೋಗ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಜೂನ್ 13ರಂದು ನೆರವೇರಿತು.
ಶಾಲಾ ಮುಖ್ಯೋಪಾಧ್ಯಾಯ ಮುಕುಂದಚಂದ್ರರವರು ದೀಪ ಬೆಳಗಿಸುವುದರೊಂದಿಗೆ ತರಬೇತಿಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.ತರಬೇತಿಗಾಗಿ ಆಗಮಿಸಿದ ಉಜಿರೆಯ ಶ್ರೀ ಧ.ಮ.ಪ್ರಕೃತಿ ಮತ್ತು ಯೋಗ ಮಹಾವಿದ್ಯಾಲಯ (ಎಸ್.ಡಿ.ಎಂ.ವೈ.ಎಸ್ ) ಇಲ್ಲಿನ ವಿದ್ಯಾರ್ಥಿನಿ ಧೃತಿ ಜೈನ್ ಹಾಗು ದೈಹಿಕ ಶಿಕ್ಷಣ ಶಿಕ್ಷಕರಾದ ರಾಜೇಂದ್ರ ಬಲ್ಲಾಳ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕಿ ಜಯಂತಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.