Site icon Suddi Belthangady

ನಾರಾವಿ: ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ

ನಾರಾವಿ: ಗುರುವಾಯನಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಾರಾವಿ ಮುಂಗಾರು ಯಾಂತ್ರಿಕೃತ ಭತ್ತ ಬೇಸಾಯಕ್ಕೆ ಸಸಿ ಮಡಿ ತಯಾರಿ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.

ನಾನಾ ಕಾರಣಗಳಿಂದ ಭತ್ತ ಬೆಳೆಯುವವರ ಸಂಖ್ಯೆ ಇಳಿಮುಖವಾಗುತ್ತಿದೆ ಎಂಬ ಆತಂಕದ ನಡುವೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಯಂತ್ರಶ್ರೀ ಯೋಜನೆ ಮೂಲಕ ರೈತರ ಉತ್ತೇಜನ ನೀಡುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಗುರುವಾಯನಕೆರೆ ಶ್ರೀ.ಕ್ಷೇ.ಧ.ಗ್ರಾ.ಯೋಜನಾಧಿಕಾರಿ ದಯಾನಂದ ಪೂಜಾರಿ ಹೇಳಿದರು.

ಪ್ರಶಾಂತ್ ರವರ ಕೇಂದ್ರೀಕೃತ ನರ್ಸರಿಯಲ್ಲಿ ರೈತರಿಗೆ ಕಡಿಮೆ ದರದಲ್ಲಿ ರೈತರಿಗೆ ಅನುಕೂಲವಾಗುವ ಸಸಿ ಮಡಿ ತಯಾರಿಸಿ ನೀಡುತ್ತಿದ್ದಾರೆ.

ಪ್ರಥಮದಲ್ಲಿ ಬಿತ್ತನೆಗೆ ಯೋಗ್ಯವಾದ ಭತ್ತದ ಬೀಜದ ಆಯ್ಕೆ ಮಾಡುವುದು ಬೀಜೋಪಚಾರ ಮಾಡಿದ ಭತ್ತದ ಬೀಜ ಒಂದು ಎಕ್ರೆಗೆ 12ರಿಂದ 15 ಕೆಜಿ ಬೀಜ ಬೇಕಾಗುತ್ತದೆ ಅದನ್ನು ಮುಂಚಿತವಾಗಿ ನೆನೆ ಹಾಕಿ ಇಡಬೇಕು ಬಳಿಕ ಮೇಲೆತ್ತಿ ಮೊಳಕೆ ಬರಿಸಲು ಇಡಬೇಕು.ಮುಂಚಿತವಾಗಿ ಮಣ್ಣನ್ನು ಜರಡಿ ಹಿಡಿದು ಸಂಗ್ರಹಿಸಿ ಇಡಬೇಕು ಒಂದು ಎಕ್ರೆ ಪ್ರದೇಶಕ್ಕೆ 70ರಿಂದ 80 ಟ್ರೇ ಗಳು ಬೇಕಾಗಿದ್ದು ಟ್ರೇ ಗಳಿಗೆ ಸರಿಯಾಗಿ ಜರಡಿ ಹಿಡಿದ ಮಣ್ಣನ್ನು ಸರಿಯಾಗಿ ತುಂಬಬೇಕು.ಮೊಳಕೆ ಬರಿಸಿದ ಬತ್ತದ ಬೀಜವನ್ನು ಸರಿಯಾಗಿ ಟ್ರೇ ಬಿತ್ತಿ ಹೊದಿಕೆ ಮಾಡಬೇಕು ಮೂರು ದಿನ ನಂತರ ಹೊದಿಕೆಯನ್ನು ತೆಗೆದು ದಿನಕ್ಕೆ ಎರಡು ಅಥವಾ ಮೂರು ಬಾರಿ ಮಿತವಾಗಿ ನೀರನ್ನು ಹಿಡಿಯಬೇಕು.15ರಿಂದ 18 ದಿನದೊಳಗೆ ನಾಟಿಗೆ ಯೋಗ್ಯವಾದ ಸಸಿ ಮಡಿ ತಯಾರಾಗುತ್ತದೆ ಎಂದು ಕೃಷಿ ಮೇಲ್ವಿಚಾರಕ ಕೃಷ್ಣ ಗೌಡ ಮಾಹಿತಿ ನೀಡಿದರು.

ಪ್ರಶಾಂತ್ ಚಿತ್ತಾರ, ಅಣ್ಣಿ ಪೂಜಾರಿ, ಕೇಶವ ಪೂಜಾರಿ, ನೀಲಯ್ಯ, ಕಮಲಾಕ್ಷಿ , ಸುಶೀಲ, ಈರಮ್ಮ, ಯಶೋಧ, ಸುಮಿತ್ರಾ, ವಶಾಂತಿ,, ಚಂದ್ರಪ್ಪ ಮುಂತಾದವರು ಉಪಸ್ಥಿತರಿದ್ದರು.

Exit mobile version