ಲಾಯಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ತಂಗಡಿ ತಾಲೂಕಿನ ಲಾಯಿಲ ವಲಯದ ಮಲೆಬೆಟ್ಟು ಕಾರ್ಯಕ್ಷೇತ್ರದ ಯಶೋಧರ ಗೌಡ ರವರ ಬೆಂಕಿಯಿಂದ ತನ್ನ ದೇಹದ ಸ್ವಲ್ಪ ಭಾಗ ಸುಟ್ಟು ಹೋಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಯ ವೆಚ್ಚ 15,000/- ಮೊತ್ತವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗೆಯವರು ಮಂಜೂರಾತಿಯನ್ನು ಮಾಡಿದ್ದು, ಈ ಮೊತ್ತದ ಚೆಕ್ ನ್ನು ಮಲೆಬೆಟ್ಟು ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ರವರು ಸದಸ್ಯರ ಮನೆಯಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕಿನ ಎಸ್.ಕೆ.ಡಿ.ಆರ್.ಡಿ.ಪಿ ಮ್ಯಾನೇಜರ್ ರತನ್ ಕುಮಾರ್, ಒಕ್ಕೂಟದ ಪದಾಧಿಕಾರಿಯಾದ ತೇಜವತಿ, ಉಮೇಶ ಗೌಡ, ಸೇವಾಪ್ರತಿನಿಧಿ ಲೀಲಾ, ವಲಯ ಮೇಲ್ವಿಚಾರಕ ಸುಶಾಂತ್ ಉಪಸ್ಥಿತರಿದ್ದರು.