Site icon Suddi Belthangady

ಕೊಕ್ಕಡ: ಅಮೃತ ಗ್ರಾಮ ಯೋಜನೆಯಡಿ ಅಂಗನವಾಡಿ ಕೇಂದ್ರಗಳಿಗೆ ಆಟದ ಸಾಮಾನು ವಿತರಣೆ

ಕೊಕ್ಕಡ: ಅಮೃತ ಗ್ರಾಮ ಯೋಜನೆಯಡಿ ಕೊಕ್ಕಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಸರಕಾರಿ ಅಂಗನವಾಡಿಗಳಿಗೆ 4 ಲಕ್ಷ ವೆಚ್ಚದಲ್ಲಿ ಆಟದ ಸಾಮಾನು ವಿತರಣೆ ಕಾರ್ಯ ನಡೆಯಿತು.

ಕೊಕ್ಕಡ ಪಂಚಾಯಿತಿನ ವತಿಯಿಂದ ಅಮೃತ ಗ್ರಾಮ ಯೋಜನೆಯ ಅಡಿಯಲ್ಲಿ ಕೊಕ್ಕಡ, ಗೋಳದಬೈಲು, ಪಿಜಿನಡ್ಕ, ಹಳ್ಳಿಗೇರಿ, ಉಪ್ಪಾರಪಳಿಕೆ, ಮುಂಡೂರುಪಳಿಕೆ, ಸೌತಡ್ಕ ಸೇರಿ ಏಳು ಅಂಗನವಾಡಿಗಳಿಗೆ 4 ಲಕ್ಷ ವೆಚ್ಚದಲ್ಲಿ ಉಯ್ಯಾಲೆ, ಜಾರುಬಂಡಿ ಮುಂತಾದ ಆಟಿಕೆ ವಸ್ತುಗಳನ್ನು ಅಳವಡಿಸಲಾಯಿತು.

Exit mobile version