Site icon Suddi Belthangady

ನಾರಾವಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಡಾಕಯ್ಯ ಪೂಜಾರಿ ನಿಧನ

ನಾರಾವಿ: ನಾರಾವಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷ ಡಾಕಯ್ಯ ಪೂಜಾರಿ (70ವ) ರವರು ಜೂ.10ರಂದು ಅಸೌಖ್ಯದಿಂದ ನಿಧನರಾಗಿದ್ದಾರೆ.

ಇವರು ಭಾರತೀಯ ಜನತಾ ಪಾರ್ಟಿ ನಾರಾವಿಯ ಹಿರಿಯ ಮುಖಂಡ, ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಸಹ ಮೊಕ್ತೇಸರರಾಗಿ ಮತ್ತು ನಾರಾವಿ ಶ್ರೀ ಬ್ರಹ್ಮಬೈದರ್ಕಳ ಗರಡಿಯ ಮೊಕ್ತೇಸರರಾಗಿ ಸೇವೆ ಸಲ್ಲಿಸಿ ಜನಾನುರಾಗಿಯಾಗಿದ್ದರು.

ಮೃತರು ಪತ್ನಿ ಸುನಂದ, ಮಕ್ಕಳಾದ ಶಾಲಿನಿ, ನಳಿನಿ, ಸಂತೋಷ್, ಮಮತಾ ಅವರನ್ನು ಅಗಲಿದ್ದಾರೆ.

Exit mobile version