ಮಂಜೊಟ್ಟಿ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಇಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆಸಲಾಯಿತು.
ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಚುನಾವಣೆಯು ಮಹತ್ವದ ಪಾತ್ರ ವಹಿಸಿತ್ತು. ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸೈಯ್ಯದ್ ಹಬೀಬ್, ಶಾಲಾ ಮುಖ್ಯೋಪಾಧ್ಯಾಯಿನಿ ಜಾಕಿನ್ ಬಿನ್ ಮತ್ತು ಶಾಲಾ ಶಿಕ್ಷಕ ಸಮೂಹ ಮತದಾನ ಮಾಡುವುದರ ಮೂಲಕ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು.
ಚುನಾವಣೆಯ ಫಲಿತಾಂಶವಾಗಿ ಮೊಹಮ್ಮದ್ ಶಮ್ಮಾಝ್ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಆಯ್ಕೆಯಾದರು. ವಿದ್ಯಾರ್ಥಿ ಸಂಘದ ವಿವಿಧ ಘಟಕಗಳಿಗೆ ನಡೆದ ಚುನಾವಣೆಯಲ್ಲಿ ಶಾಲಾ ಉಪನಾಯಕನಾಗಿ ಝಿಶಾನ್, ಶಿಸ್ತು ಮಂತ್ರಿಯಾಗಿ ತಮೀಝ್ ಉಪನಾಯಕಿಯಾಗಿ ಹಿಫ್ಸಾ ಬೇಗಂ, ಕ್ರೀಡಾ ಮಂತ್ರಿಯಾಗಿ ಹಫೀಜ್, ಉಪನಾಯಕಿಯಾಗಿ ಅಶ್ಫಿಯ, ಆರೋಗ್ಯಮಂತ್ರಿಯಾಗಿ ರಫಾ ಆಸಿಯ, ಉಪನಾಯಕನಾಗಿ ನಫೀಝ್, ಸ್ವಚ್ಛತಾ ಮಂತ್ರಿಯಾಗಿ ಸುಹೈಬ್, ಉಪನಾಯಕನಾಗಿ ಜೆಸ್ವಿನ್ ಜೇಮ್ಸ್, ಗ್ರಂಥಾಲಯದ ಮಂತ್ರಿಯಾಗಿ ರಫಾಝ್, ಉಪನಾಯಕಿಯಾಗಿ ಫಾತಿಮತ್ ಫಾಯಿಝ, ಸಾಂಸ್ಕೃತಿಕ ಮಂತ್ರಿಯಾಗಿ ಶೇಖ್ ಶಿಹಾಬುದ್ದೀನ್, ಉಪನಾಯಕನಾಗಿ ಶಾಖಿಬುಲ್ ಹಸನ್, ಶಿಕ್ಷಣ ಮಂತ್ರಿಯಾಗಿ !ಜಾಹಫರ್, ನಾಯಕಿಯಾಗಿ ಖದೀಜತ್ ರಂಝಿಯಾ ಆಯ್ಕೆಯಾದರು.