Site icon Suddi Belthangady

ರಾಜ್ಯ ಮಟ್ಟದ ಯುವ, ಸೀನಿಯರ್ ಪುರುಷ ಮತ್ತು ಮಹಿಳಾ ವಿಭಾಗದ ಅಥ್ಲೆಟಿಕ್ ಕ್ರೀಡಾಕೂಟ-2024: ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿ ನಿತ್ಯಶ್ರೀ.ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಜಿರೆ: ರಾಜ್ಯ ಮಟ್ಟದ ಯುವ, ಸೀನಿಯರ್ ಪುರುಷ ಮತ್ತು ಮಹಿಳಾ ವಿಭಾಗದ ಅಥ್ಲೆಟಿಕ್ ಕ್ರೀಡಾಕೂಟ- 2024 ಪಂದ್ಯಾವಳಿಯು ಮೇ.6 ಮತ್ತು 7ರಂದು ರಂದು ಅಜ್ಜರಕಾಡು ಉಡುಪಿಯಲ್ಲಿ ನಡೆಯಿತು.

ಎಸ್.ಡಿ.ಎಂ ಕಾಲೇಜಿನ 6 ವಿದ್ಯಾರ್ಥಿಗಳು ಭಾಗವಹಿಸಿದ್ದು, ನಿತ್ಯಶ್ರೀ.ವಿ ಇವರು ಲಾಂಗ್ ಜಂಪ್ ವಿಭಾಗದಲ್ಲಿ 5.13ಮೀಟರ್ ದೂರವನ್ನು ಜಿಗಿದು, ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ ಎಸ್ ಡಿ ಎಂ ಕಾಲೇಜಿನ ಸಂದೇಶ ಪೂಂಜ ಇವರು ತರಬೇತಿಯನ್ನು ನೀಡಿರುತ್ತಾರೆ.

Exit mobile version