Site icon Suddi Belthangady

ಪತ್ರಿಕಾಗೋಷ್ಠಿ- ಕಳೆಂಜ ಹಲ್ಲೆ ಪ್ರಕರಣವನ್ನು ಸೂಕ್ತ ತನಿಖೆ ಮಾಡಿ ರಾಜೇಶ್ ಎಂ.ಕೆ ಯವರಿಗೆ ನ್ಯಾಯ ನೀಡಬೇಕು: ಧನಂಜಯ ಗೌಡ

ಬೆಳ್ತಂಗಡಿ: ಕಳೆಂಜದಲ್ಲಿ ಸ್ಥಳೀಯ ಕುಶಾಲಪ್ಪ ಗೌಡರು ರಾಜೇಶ್ ಎಂ.ಕೆ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ನಿರಾಪರಾಧಿ ರಾಜೇಶ್ ಎಂ.ಕೆ ಯವರಿಗೆ ನ್ಯಾಯ ನೀಡಬೇಕು ಎಂದು ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಧನಂಜಯ ಗೌಡ ಹೇಳಿದರು. ಅವರು ಜೂ.10ರಂದು ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಜೂ.4ರಂದು ರಾಜೇಶ್ ಎಮ್.ಕೆ ಯವರು ಸಂಜೆ ಸಮಯ ಅಂದಾಜು 6ರಿಂದ 7.00ರವರಗೆ ಒಳಗೆ ತನ್ನ ಅಡಿಕೆ ಅಂಗಡಿಗೆ ಬಾಗಿಲು ಹಾಕಿ ಮನೆಗೆ ತೆರಳುವಾಗ ಕಾಯರ್ತಡ್ಕದಿಂದ ಅಂದಾಜು 400 ಮೀಟರ್ ದೂರದ ಮಿಯಾರು ರಸ್ತೆಯ ಕಜೆ ಎಂಬಲ್ಲಿ ರಾಜೇಶ ಎಂಬವರಿಗೆ ದೂರವಾಣಿ ಕರೆ ನಿಮಿತ್ತ ವಾಹನ ನಿಲ್ಲಿಸಿ ಮಾತಾಡುವ ಸಮಯದಲ್ಲಿ ಕುಶಾಲಪ್ಪ ಗೌಡರ ತಂದೆ ಮೋಂಟ ಗೌಡರು ರಾಜೇಶ ಎಮ್.ಕೆ ಯಲ್ಲಿ ಮಾತಾನಾಡುತ್ತಿದ್ದ ಸಂದರ್ಭದಲ್ಲಿ ಕುಶಾಲಪ್ಪ ಗೌಡರು ಪಿ.ಡಬ್ಲ್ಯು ರಸ್ತೆಯಿಂದ 2ಮೀ ಒಳಗೆ ಇರುವ ಮನೆಯಿಂದ ದೊಡ್ಡ ತಲವಾರು ತಂದು ರಾಜೇಶ ಎಮ್.ಕೆ ಯವರ ಮೇಲೆ ಹಲ್ಲೆ ಮಾಡಿರುತ್ತಾರೆ. ಇದನ್ನು ಅದೇ ದಾರಿಯಲ್ಲಿ ಬರುವ ಮಂಜುನಾಥ ಗೌಡ ಮತ್ತು ಉಮೇಶ ಎಂಬವರು ಪ್ರತ್ಯಕ್ಷವಾಗಿ ನೋಡಿರುತ್ತಾರೆ.

ಕುಶಾಲಪ್ಪ ಗೌಡರು ತಾನು ಮಾಡಿದ ಪ್ರಕರಣವನ್ನು ಮುಚ್ಚಿಹಾಕಲು ತಮ್ಮ ಮಗಳನ್ನು ದುರ್ಬಳಕೆ ಮಾಡಿರುತ್ತಾರೆ ಹುಡುಗಿಯ ಭವಿಷ್ಯದ ದೃಷ್ಟಿಯಿಂದ ಸೂಕ್ತ ತನಿಖೆ ನಡೆಸಿ ಅಫರಾದಿ ಸ್ಥಾನದಲ್ಲಿರುವ ರಾಜೇಶ್ ಎಮ್.ಕೆ ಇವರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದರು.ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಸನ್ನ ಮಾತನಾಡಿ ಕುಶಾಲಪ್ಪ ಗೌಡರ ಮೇಲೆ 10 ವರ್ಷದಿಂದ ಅವರು ಹಲವಾರು ಕ್ರಿಮಿನಲ್ ಕೃತ್ಯವನ್ನು ಮಾಡಿದ್ದು ಇದನ್ನು ಮುಚ್ಚಿ ಹಾಕಲು ಈ ಹಲ್ಲೆಯನ್ನು ಮಾಡಿರುತ್ತಾರೆ.

ಸುಳ್ಳು ಕೇಸಿನ ಮೂಲಕ ಈ ರೀತಿ ಮಾಡಿರುತ್ತಾರೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಈ ಹಲ್ಲೆ ಘಟನೆ ಸಂದರ್ಭದಲ್ಲಿ ನಾನು ಅಲ್ಲಿ ಇದ್ದು ಇದು ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಪ್ರಕರಣ ಅಲ್ಲ ಎಂದರು. ಪತ್ರಿಕಾಗೋಷ್ಠಿಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಹರೀಶ್, ಜಿ.ಪ., ತಾ.ಪ.ಮಾಜಿ ಸದಸ್ಯೆ ಸುಶೀಲ, ಸಹಕಾರ ಸಂಘದ ನಿರ್ದೇಶಕಿ ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

Exit mobile version