ಬೆಳ್ತಂಗಡಿ: ಸಮುದಾಯದ ಅಭಿವೃದ್ಧಿಗೆ ಕ್ರೀಡಾಕೂಟ, ಸಾಂಸ್ಕೃತಿಕ ಕಾರ್ಯಕ್ರಮ, ಗುಮ್ಮಟೆ ಪದ ಕುಣಿತ ಸ್ಪರ್ಧೆ ಮೊದಲಾದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಂಘ ತಾಲೂಕಿನಲ್ಲಿ ಗುರುತಿಸಿಕೊಂಡಿದೆ. ಸಂಘದ ಆಡಳಿತ ಪಾರದರ್ಶಕವಾಗಿ ನಡೆಯುತ್ತಿದ್ದು, ಸಂಘದ ಸದಸ್ಯರು ಖರ್ಚು ವೆಚ್ಚಗಳ ಕುರಿತು ಮಾಹಿತಿಯನ್ನೂ ಪಡೆಯಬಹುದು. ಅನಗತ್ಯ ವೆಚ್ಚ ನಡೆಸದೆ ಸಂಘ ಅಭಿವೃದ್ಧಿಗೆ ಬೇಕಾಗಿ ಪದಾಧಿಕಾರಿಗಳು ತಮ್ಮ ಸಮಯ ಮೀಸಲಿಟ್ಟಿದ್ದಾರೆ. ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿದಾಗ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದು ತಾಲೂಕು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಉಮೇಶ್ ಕೆ. ಕೇಳ್ದಡ್ಕ ಹೇಳಿದರು.
ಅವರು ತಾಲೂಕು ಮರಾಟಿ ಸೇವಾ ಸಂಘದ ವಾರ್ಷಿಕ ಮಹಾಸಭೆ ಮತ್ತು ನೂತನ ಕಾರ್ಯಕಾರಿ ಸಮಿತಿ ಆಯ್ಕೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆಯ್ಕೆಯಾದ ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಸೇವಾ ಮನೋಭಾವದಿಂದ ಸಂಘದ ಏಳಿಗೆಗೆ ಕಾರ್ಯ ನಿರ್ವಹಿಸಬೇಕು. ಸಂಘದ ಸದಸ್ಯರು ತಮಗೆ ಸಮಸ್ಯೆಯಾದಾಗ ಲಿಖಿತ ದೂರು ನೀಡಿದಲ್ಲಿ ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಸತೀಶ್ ಹೆಚ್.ಎಲ್. ಮಾತನಾಡಿ ಸಮಾಜದ ಬದಲಾಣೆಗೆ ಎಲ್ಲರೂ ಕಟಿಬದ್ಧರಾದಾಗ ಅಭಿವೃದ್ಧಿ ಸಾಧ್ಯ. ಸಮುದಾಯದ ಅಭಿವೃದ್ಧಿಗೆ ಗ್ರಾಮ ಮಟ್ಟದಲ್ಲಿ ಸಂಘಟನಾ ಕಾರ್ಯ ಕೈಗೊಂಡು ಕಟ್ಟಕಡೆಯ ವ್ಯಕ್ತಿಯನ್ನು ತಲುಪುವ ಕಾರ್ಯ ಮಾಡಲಾಗುವುದು. ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಿಲ್ಲೆಯಲ್ಲಿ ಸಂಘ ಗುರುತಿಸಲ್ಪಡುವಂತೆ ಮಾಡುವ ಅನಿವಾರ್ಯತೆ ಇದೆ ಎಂದರು.ಇತ್ತೀಚೆಗೆ ನಿಧನ ಹೊಂದಿದ ಸಂಘದ ಕೋಶಾಧಿಕಾರಿ ಪ್ರಜ್ವಲ್ ಮುರತ್ತಕೋಡಿ ಕುಟುಂಬಕ್ಕೆ ಮರಾಟಿ ಸಾಂತ್ವನ ನಿಧಿ ಹಸ್ತಾಂತರಿಸಲಾಯಿತು.
ವರದಿ ವಾಚನ ಹಾಗೂ ಲೆಕ್ಕಪತ್ರ ಮಂಡನೆಯನ್ನು ಪ್ರಧಾನ ಕಾರ್ಯದರ್ಶಿ ತಾರನಾಥ ನಾಯ್ಕ್ ಮಾಡಿದರು. ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಕಾರ್ಯವನ್ನು ಉಪಾಧ್ಯಕ್ಷ ವಸಂತ್ ನಾಯ್ಕ್ ನಡೆಸಿದರು.
ವೇದಿಕೆಯಲ್ಲಿ ನೂತನ ಸಂಘದ ಗೌರವಾಧ್ಯಕ್ಷ ಕೊರಗಪ್ಪ ನಾಯ್ಕ್, ಗೌರವ ಸಲಹೆಗಾರ ಕುಮಾರಯ್ಯ ನಾಯ್ಕ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಪ್ರಸಾದ್ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಮಾಧ್ಯಮ ಕಾರ್ಯದರ್ಶಿ ಹರ್ಷಿತ್ ಪಿಂಡಿವನ ವಂದಿಸಿ, ಪ್ರಭಾರ ಕೋಶಾಧಿಕಾರಿ ಸುರೇಶ್ ಹೆಚ್.ಎಲ್ ನಿರೂಪಿಸಿ, ನಿರೀಕ್ಷಾ ಹಾಗೂ ನಿತ್ಯೂಷಾ ಪ್ರಾರ್ಥಿಸಿದರು.
ನೂತನ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷತೆಯನ್ನು ಕೊರಗಪ್ಪ ನಾಯ್ಕ್, ಅಧ್ಯಕ್ಷರಾಗಿ ಸತೀಶ್ ಹೆಚ್. ಎಲ್., ಉಪಾಧ್ಯಕ್ಷರಾಗಿ ವಸಂತ್ ನಾಯ್ಕ್, ಪ್ರಭಾಕರ ನಾಯ್ಕ್, ಪ್ರಧಾನ ಕಾರ್ಯದರ್ಶಿಯಾಗಿ ತಾರನಾಥ ನಾಯ್ಕ್, ಕಾರ್ಯದರ್ಶಿಗಳಾಗಿ ಸುರೇಶ್ ಹೆಚ್. ಎಲ್., ಪವಿತ್ರಾ, ಕೋಶಾಧಿಕಾರಿಯಾಗಿ ಹರೀಶ್ ಪೆರಾಜೆ, ಸಂಘಟನಾ ಕಾರ್ಯದರ್ಶಿಯಾಗಿ ಪ್ರಸಾದ್ ನಾಯ್ಕ್, ಕ್ರೀಡಾ ಕಾರ್ಯದರ್ಶಿಯಾಗಿ ರವಿ ನಾಯ್ಕ್ ಬಡಕೋಡಿ, ಜೊತೆ ಕಾರ್ಯದರ್ಶಿಯಾಗಿ ಸಚಿನ್ ತೆಂಕಕಾರಂದೂರು, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀನಿವಾಸ್ ನಾಯ್ಕ್, ಜೊತೆ ಕಾರ್ಯದರ್ಶಿಯಾಗಿ ರಾಘವೇಂದ್ರ ನಾಯ್ಕ್ , ಪತ್ರಿಕಾಮಾಧ್ಯಮ ಕಾರ್ಯದರ್ಶಿಯಾಗಿ ಹರ್ಷಿತ್ ಪಿಂಡಿವನ, ಜೊತೆ ಕಾರ್ಯದರ್ಶಿಯಾಗಿ ಶರತ್ ಕಣಿಯೂರು, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚಂದ್ರಾವತಿ ಕೊಯ್ಯೂರು, ರಾಜೇಶ್ ನಾಯ್ಕ್ ಮದ್ದಡ್ಕ, ವಿಶಾಲ, ಭಾಸ್ಕರ ನಾಯ್ಕ್, ರಜನೀಶ್, ಗೌರವ ಸಲಹೆಗಾರರಾಗಿ ಸಂತೋಷ್ ಕುಮಾರ್ ಲಾಯಿಲಾ, ಕುಮಾರಯ ನಾಯ್ಕ್, ಉಮೇಶ್ ನಾಯ್ಕ್ ಕೇಳ್ತಡ್ಕ ಆಯ್ಕೆಯಾದರು.