Site icon Suddi Belthangady

ಕುವೆಟ್ಟು: ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ

ಕುವೆಟ್ಟು: ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲ ರಚನೆ ಮಾಡಲಾಯಿತು.

ಶಾಲಾ ಮುಖ್ಯಮಂತ್ರಿಯಾಗಿ ಶಿವಾನಿ 8ನೇ ತರಗತಿ, ಉಪ ಮುಖ್ಯಮಂತ್ರಿಯಾಗಿ ಆಲ್ವಿನ್ 7ನೇ ತರಗತಿ ಆಯ್ಕೆಯಾದರು.

ವಿರೋಧ ಪಕ್ಷದ ನಾಯಕಿಯಾಗಿ ಶಿಫಾನ, ಶಿಕ್ಷಣ ಮಂತ್ರಿಯಾಗಿ ಅನುಷಾ, ಗೃಹ ಮಂತ್ರಿಯಾಗಿ ಮೋಹನ, ನೀರಾವರಿ ಮಂತ್ರಿಯಾಗಿ ಧೀರಜ್, ಕ್ರೀಡಾ ಮಂತ್ರಿಯಾಗಿ ಸ್ವರ್ತಿಕ್, ಆರೋಗ್ಯ ಮಂತ್ರಿಯಾಗಿ ಮುಸೀದಾ ಬಾನು, ಸಾಂಸ್ಕೃತಿಕ ಮಂತ್ರಿಯಾಗಿ ನಿಹಾನ ಆಯ್ಕೆಯಾದರು.

ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್ ಮತ್ತು ಅಧ್ಯಾಪಕ ವೃಂದ ಚುನಾವಣಾ ಪ್ರಕ್ರಿಯೆ ನಡೆಸಿದರು.ಶಾಲಾ ಎಸ್ ಡಿ ಯಂ ಸಿ ಅಧ್ಯಕ್ಷ ಸಿರಾಜ್ ಎಂ ಚಿಲಿಂಬಿ, ಸದಸ್ಯ ಸಮೀರ್ ಸಹಕರಿಸಿದರು.

Exit mobile version