Site icon Suddi Belthangady

ಮಡಂತ್ಯಾರು ರೋಟರಿ ಕ್ಲಬ್ ಗೆ ಪ್ರತಿಷ್ಠಿತ ಪ್ಲಾಟಿನಂ ಕ್ಲಬ್ ಪ್ರಶಸ್ತಿ

ಮಡಂತ್ಯಾರು : ದ.ಕ ಜಿಲ್ಲೆಯ ಪ್ರತಿಷ್ಠಿತ ರೋಟರಿ ಕ್ಲಬ್ ಗಳಲ್ಲಿ ಒಂದಾದ ಮಡಂತ್ಯಾರು ರೋಟರಿ ಕ್ಲಬ್ ಗೆ ಇತ್ತೀಚಿಗೆ ಮೈಸೂರುನಲ್ಲಿ ನಡೆದ ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಪ್ಲಾಟಿನಂ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಸಕ್ತ ಸಾಲಿನಲ್ಲಿ ಮಡಂತ್ಯಾರು ಕ್ಲಬ್ ಜಿಲ್ಲೆಯಲ್ಲೇ ಮಾದರಿ ಕಾರ್ಯಕ್ರಮಗಳಾದ ನಮ್ಮ ನಡೆ ಆರ್ಥಿಕ ಸಾಕ್ಷಾರತೆಯ ಕಡೆಗೆ ಹಾಗೂ ಇತರ 180ಕ್ಕೂ ಅಧಿಕ ಸಾರ್ವಜನಿಕರಿಗೆ ಬಹು ಉಪಯೋಗವಾಗುವಂತಹ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.ಇದರಿಂದಾಗಿ ಕ್ಲಬ್ ನ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ಲಾಟಿನಂ ಪ್ರಶಸ್ತಿ ಬಂದಿರುತ್ತದೆ.

ಪ್ರಸಕ್ತ ಸಾಲಿನ ಕ್ಲಬ್ ನ ಸೇವಾಚಟುವಟಿಕೆ ಗಳನ್ನು ಆಧಾರಿಸಿ ಕೊಡಮಾಡುವ ಅತ್ಯುನ್ನತ ಗೌರವ ಕ್ಕೆ ಪಾತ್ರರಾದ ಕ್ಲಬ್ ನ ಪರವಾಗಿ ಕ್ಲಬ್ ನ ಅಧ್ಯಕ್ಷ ಪೇಜಾವರ ಶ್ರೀಧರ ರಾವ್ ಇವರು ಜಿಲ್ಲಾ ಗೌವರ್ನರ್ ಆದ ಹೆಚ್. ಆರ್.ಕೇಶವ ರವರಿಂದ ಗೌರವವನ್ನು ಸ್ವೀಕರಿಸಿದರು.

ಕ್ಲಬ್ ನ ಸಹಕಾರ್ಯದರ್ಶಿ ಆದಿತ್ಯ ಎಸ್ ರಾವ್ ಮತ್ತು ಇತರ ಸದಸ್ಯರು ಹಾಜರಿದ್ದರು.

Exit mobile version