Site icon Suddi Belthangady

ರಾಜ್ಯಮಟ್ಟದ ಸೀನಿಯರ್ ಮತ್ತು ಯೂತ್ ಮೀಟ್-2024: ತೆಂಕಕಾರಂದೂರುವಿನ ನೋಯಲ್ ಆರ್.ಪಿ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಬೆಳ್ತಂಗಡಿ: ಅಜರಕಾಡುವಿನ ಉಡುಪಿ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ಜೂ.6,7ರವರೆಗೆ ನಡೆದ ರಾಜ್ಯಮಟ್ಟದ ಸೀನಿಯರ್ ಮತ್ತು ಯೂತ್ ಮೀಟ್-2024 ಇದರಲ್ಲಿ ತೆಂಕಕಾರಂದೂರು ಎಂಬ ಹಳ್ಳಿಯ ನೋಯಲ್ ಆರ್.ಪಿ ಇವರು ಉದ್ದಜಿಗಿತದಲ್ಲಿ ಚಿನ್ನದ ಪದಕ ಪಡೆದು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.

ಬೆಳ್ತಂಗಡಿ ತಾಲೂಕಿನ ಬಳಂಜ ಗ್ರಾಮದ ನಿವಾಸಿಯಾಗಿರುವ ರಜಿ ಹಾಗೂ ಓಮನ ಇವರ ಪುತ್ರನಾಗಿರುವ ನೋಯಲ್ ಆರ್.ಪಿ ಪ್ರಸ್ತುತ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಕ್ರೀಡಾ ವಿದ್ಯಾರ್ಥಿಯಾಗಿ ತರಬೇತಿಯನ್ನು ಪಡೆಯುತ್ತಿದ್ದಾರೆ.

Exit mobile version