ವೇಣೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ)ಯಲ್ಲಿ ದೇಶದ ಅತ್ಯಂತ ಪ್ರಖ್ಯಾತ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಒಂದಾದ “ಬಾಷ್” ಕಂಪನಿಯವರು ಸಂದರ್ಶನ ನಡೆಸಿದರು.
ಎರಡು ದಿನಗಳಲ್ಲಿ ನಡೆದ ಈ ಸಂದರ್ಶನದಲ್ಲಿ ಒಟ್ಟು 353 ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸಿ, ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಪ್ರಕ್ರಿಯೆ ಕೈಗೊಂಡರು. ಬಾಷ್ ಕಂಪನಿಯ ಪ್ರೊಡಕ್ಷನ್ ಮೆನೇಜರ್ ಮಿಥುನ್ ಸುರೇಶ್, ಮಾನವ ಸಂಪನ್ಮೂಲ ಅಧಿಕಾರಿಗಳಾದ ಪ್ರದೀಪ್ ಕುಮಾರ್, ಧೀರಜ್ ಮತ್ತು ಟೀಮ್ ಲೀಡರ್ ರವೀಂದ್ರ ಆಯ್ಕೆ ಪ್ರಕ್ರಿಯ ನಡೆಸಿದರು.
ಇಲೆಕ್ಟ್ರಾನಿಕ್ಸ್, ಇಲೆಕ್ಟ್ರಿಷಿಯನ್ ಮತ್ತು COPA ವೃತ್ತಿಯ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿರುತ್ತಾರೆ.
ಸಂಸ್ಥೆಯ ಪ್ರಾಚಾರ್ಯ ವಿಶ್ವೇಶ್ವರ ಪ್ರಸಾದ್, ಕಿರಿಯ ತರಬೇತಿ ಅಧಿಕಾರಿಗಳಾದ ಶ್ರೇಯಸ್, ಶ್ರೀಧರ ಡಿ., ದಿನೇಶ್, ನಾಗೇಶ್ ಶೇಟ್, ಜೋಸ್ನ, ನುತಿಪ್ರಿಯ ಆಯ್ಕೆ ಪ್ರಕ್ರಿಯೆಯಲ್ಲಿ ಸಹಕಾರ ನೀಡಿದರು.