Site icon Suddi Belthangady

ಬಾಂಜಾರುಮಲೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ- ಶೇ.100 ಮತದಾನ ಮಾಡಿರುವುದಕ್ಕೆ ಮೆಚ್ಚುಗೆ

ನೆರಿಯ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯಿತಿಯ ಬಾಂಜಾರುಮಲೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಎಸ್. ಅವರು ಜೂ.7ರಂದು ಭೇಟಿ ನೀಡಿದರು.

ಚಾರ್ಮಾಡಿ ಹೆದ್ದಾರಿಯಿಂದ ಸುಮಾರು 11 ಕಿ.ಮೀ. ದೂರದ ದುರ್ಗಮ ಪ್ರದೇಶಕ್ಕೆ ಭೇಟಿ ನೀಡಿ, ಸ್ಥಳೀಯರೊಂದಿಗೆ ಮಾತುಕತೆ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಶೇ.100 ಮತದಾನ (111 ಮತಗಳು) ಚಲಾವಣೆಯಾದ ಮತಗಟ್ಟೆ ಇದಾಗಿದ್ದು, ಗ್ರಾಮದಿಂದ ಹೊರಗೆ ವಾಸಿಸುತ್ತಿರುವ ವ್ಯಕ್ತಿಗಳು ಸಹ ದೂರದಿಂದ ಬಂದು ಮತವನ್ನು ಚಲಾಯಿಸಿರುವುದು ವಿಶೇಷ ಎಂದು ಸುರೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ರೀತಿ ಮತದಾನ ಮಾಡಿ ಸರ್ಕಾರದ ಗಮನ ಸೆಳೆದು ಕೆಲವು ಸೌಕರ್ಯ ಪಡೆಯುವ ಉದ್ದೇಶ ಗ್ರಾಮಸ್ಥರದ್ದು. ಮಲೆಕುಡಿಯ ಸಮುದಾಯಕ್ಕೆ ಸೇರಿದ ಕುಟುಂಬಗಳೇ ಈ ಗ್ರಾಮದಲ್ಲಿ ಹೆಚ್ಚು ಇವೆ ಎಂದು ಸಾಮಾಜಿಕ ಜಾಲತಾಣ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮಾಜಿ ಸಚಿವರು ಗ್ರಾಮದ ಯುವಕರನ್ನು ಶಾಲು ಹೊದಿಸಿ ಅಭಿನಂದಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರ ಕುರಿತು ಚರ್ಚಿಸಿದರು.ಸ್ಥಳೀಯರಾದ ಸುಜಿತ್, ಲೋಕೇಶ್, ಲಕ್ಷ್ಮಣ, ರಮೇಶ್, ಚಂದ್ರಶೇಖರ್, ವಿಘ್ನೇಶ್, ಶೇಖರ್ ಮತ್ತಿತರರು, ಬಿಜೆಪಿಯ ಶಕ್ತಿ ಕೇಂದ್ರದ ಪ್ರಮುಖ ವಿಶ್ವನಾಥ ಉಪಸ್ಥಿತರಿದ್ದರು.

Exit mobile version