ಮುಂಡಾಜೆ: ಇಲ್ಲಿನ ವೈನ್ ಶಾಪ್ ಸಮೀಪ ಜೂನ್ 6ರಂದು ರಾತ್ರಿ ಇತ್ತಂಡಗಳ ಮಧ್ಯೆ ಗಲಾಟೆ ಆಗಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.
ಉಜಿರೆಯ ಯುವಕರ ತಂಡ ಕಡಿರುದ್ಯಾವರ ಪಂಚಾಯತ್ ಮಾಜಿ ಅಧ್ಯಕ್ಷ, ಹಾಲಿ ಸದಸ್ಯನಿಗೆ ಹಲ್ಲೆ ನಡೆಸಿದ್ದು, ಅಂಗಿ ಹರಿದಿದ್ದು, ಚಿನ್ನದ ಸರ ಕೂಡ ಎಳೆದಾಟದ ವೇಳೆ ತುಂಡಾಗಿದೆನ್ನಲಾಗಿದೆ.
ಗಲಾಟೆಯ ಕೆಲ ವೀಡಿಯೋ ತುಣುಕುಗಳು ವಾಟ್ಸಾಪ್ ನಲ್ಲಿ ಹರಿದಾಡುತ್ತಿದ್ದು, ಈವರೆಗೆ ಯಾವುದೇ ದೂರು ದಾಖಲಾಗಿರುವ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಮಾಜಿ ಅಧ್ಯಕ್ಷನ ಧ್ವನಿ ಎನ್ನಲಾದ ಆಡಿಯೋದಲ್ಲಿ ಆಕ್ರೋಶದಿಂದ ಮಾತನಾಡುತ್ತಾ ಅಕ್ರಮ ಮರಳುಗಾರಿಕೆ, ಪಿಕಪ್, ರೈಡ್ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡಿರುವ ಪೋನ್ ಸಂಭಾಷಣೆಯ ಆಡಿಯೋ ವೈರಲ್ ಆಗಿದೆ.
ಈ ಆಡಿಯೋ, ವೀಡಿಯೋಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.