Site icon Suddi Belthangady

ನೆಲ್ಯಾಡಿ: ಸಂತ ಅಲ್ಫೋನ್ಸ ಚರ್ಚ್ ವತಿಯಿಂದ ಕನ್ನಡ ಸಾಹಿತಿ ಜೆಸ್ಸಿ ಪಿ.ವಿ ಗೆ ಸನ್ಮಾನ

ನೆಲ್ಯಾಡಿ: ನೆಲ್ಯಾಡಿಯ ಸಂತ ಅಲ್ಫೋನ್ಸ ಚರ್ಚ್ ನ ಸಂಡೆ ಸ್ಕೂಲ್ ಪ್ರಾರಂಭಕ್ಕೆ ಮುನ್ನುಡಿಯಾಗಿ ಸಾಗಿ ಬಂದ ಪ್ರತಿಭೋತ್ಸದಲ್ಲಿ ಸ್ಥಳೀಯ ಕನ್ನಡ ಲೇಖಕಿ ಜೆಸ್ಸಿ ಪಿ.ವಿ ಗೆ ಸಂತ ಅಲ್ಫೋನ್ಸ ಚರ್ಚ್ ನೆಲ್ಯಾಡಿ ಹಾಗೂ ಸ್ಥಳಿಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅಭಿನಂದನೆಗಳನ್ನು ಸಲ್ಲಿಸಿ ಸನ್ಮಾನಿಸಲಾಯಿತು.

ಜೆಸ್ಸಿ ಪಿ.ವಿ ಅವರು ಕನ್ನಡ ಮತ್ತು ಆಂಗ್ಲ ಬಾಷೆಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ಹೈಸ್ಕೂಲ್ ಟೀಚರ್ ಆಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು. ಪುತ್ತೂರು ತಾಲೂಕು ಇಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆಯಲ್ಲಿದ್ದಾರೆ.

ಕನ್ನಡದ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲಿ ಲೇಖನ, ಕತೆ, ಕವನಗಳು ಪ್ರಕಟವಾಗಿವೆ.ಹಾವೇರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.

ಆಕಾಶವಾಣಿಯಲ್ಲಿ ಭಾಷಣಗಳು ಪ್ರಸಾರವಾಗಿವೆ.ಇವರು ಇಲ್ಲಿನ ಆರ್ಲ ಮಾದೇರಿಯಾ ಪುದುಮನ ವರ್ಕಿ ಅನ್ನಮ್ಮ ದಂಪತಿಗಳ ಪುತ್ರಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸಪುಣ್ಯ ಕ್ಷೇತ್ರದ ವಂದನಿಯ ಫಾ.ಶಾಜಿ ಮಾತ್ಯು, ಟ್ರಷ್ಟಿಗಳಾದ ಜೋಬಿನ್, ಆಲ್ಬಿನ್, ಅಲೆಕ್ಸ್, ಶಿಬು, ಸಂಡೆ ಸ್ಕೂಲ್ ಮುಕ್ಯೋಪಾಧ್ಯಯ ರೊಯ್, ಸೇಕ್ರೆಡ್ ಹಾರ್ಟ್
ಭಗೀನಿಯರ ಮುಖ್ಯಸ್ತೆ ವಂದನಿಯ ಸಿಸ್ಟರ್ ಲಿಸ್ ಮಾತ್ಯು, ರಕ್ಷಕ ಶಿಕ್ಷಕ ಸಂಘದ ಪ್ರಕಾಶ್ ಕೆ ಜೆ, ಲಿಸಿ ಉಪಸ್ಥಿತರಿದ್ದರು.

Exit mobile version