Site icon Suddi Belthangady

ಪುಂಜಾಲಕಟ್ಟೆ ಬುರೂಜ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಪುಂಜಾಲಕಟ್ಟೆ: ಬುರೂಜ್ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್ ರಝಾನಗರ ಕಲಾಬಾಗಿಲು ಮೂಡುಪಡುಕೋಡಿ ಇಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ.5ರಂದು ಆಚರಿಸಲಾಯಿತು.

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿಮಲ ಸಮ್ಮುಖದಲ್ಲಿ ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಇಂದಿನ ದಿನಕ್ಕೆ ಅರ್ಥ ಕಲ್ಪಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಎಲ್ಸಿ ಲಸ್ರಾದೊ ಮಾತಾಡಿ “ಕೇವಲ ಗಿಡ ನೆಡುವುದು ಮಾತ್ರವಲ್ಲ ಅದನ್ನು ಬೆಳೆಸಿ, ಪೋಷಿಸುವುದು ಅಷ್ಟೇ ಮುಖ್ಯ ಎಂದು ಹೇಳಿ ಹಾರೈಸಿದರು.

ಶೇಖ್ ಜಲಾಲುದ್ದೀನ್ ಮಾತನಾಡಿ, ಪರಿಸರ ಕಾಳಜಿ ಹಾಗೂ ಪರಿಸರ ರಕ್ಷಣೆ ಹೇಗೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿ, ಪ್ರತಿ ತರಗತಿಯ ವಿದ್ಯಾರ್ಥಿಗಳು ಒಂದೊಂದು ಗುಂಪು ಮಾಡಿ ಮುಂದಿನ ಬುಧವಾರ ಪ್ರತಿ ತಂಡದವರು ಒಂದೊಂದು ಗಿಡ ನೆಟ್ಟು ಅದನ್ನು ಪೋಷಿಸಬೇಕು, ಸರಿಯಾಗಿ ಪೋಷಿಸುವ ತಂಡಕ್ಕೆ ಶಾಲಾ ವಾರ್ಷೀಕೋತ್ಸವದಂದು ವಿಶೇಷ ಬಹುಮಾನ ವಿತರಿಸಲಾಗುವುದು ಎಂದರು.

ಈ ಸಮಯದಲ್ಲಿ ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶಿಕ್ಷಕ ವೃಂದ ಉಪಸ್ಥಿತರಿದ್ದರು.

Exit mobile version