Site icon Suddi Belthangady

ಕಳೆಂಜದಲ್ಲಿ ರಾಜೇಶ್ ಎಮ್.ಕೆ ಮೇಲೆ ನಡೆದ ಘಟನೆ ಖಂಡನೀಯ: ಬೆಳ್ತಂಗಡಿ ತಾ. ಎಸ್.ಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರೇಮಚಂದ್ರ.ಕೆ

ಕಳೆಂಜ: ಕಳೆಂಜದಲ್ಲಿ ಜೂ.04ರಂದು ನಡೆದ ಬಿ.ಜೆ.ಪಿ ಎಸ್.ಸಿ ಮೋರ್ಚಾದ ಅಧ್ಯಕ್ಷ ರಾಜೇಶ್ ರವರ ಮೇಲೆ ಚುನಾವಣ ಸೋಲಿನ ಹತಾಶೆಯಿಂದ ಹಾಗೂ ಬೆಳ್ತಂಗಡಿ ತಾಲೂಕಿನ ಕಾಂಗ್ರೆಸ್ ನಾಯಕರ ಪ್ರೋತ್ಸಾಹದಿಂದ ಈ ರೀತಿ ಹಲ್ಲೆ ನಡೆದಿರುವುದು ತೀವ್ರ ಖಂಡನೀಯ.

ಇನ್ನು ಮುಂದೆ ಈ ರೀತಿಯ ಬೆಳವಣಿಗೆಗಳು ನಡೆಯದಂತೆ ಬೆಳ್ತಂಗಡಿ ಕಾಂಗ್ರೆಸ್ ನಾಯಕರು ನೋಡಿಕೊಂಡರೆ ಒಳ್ಳೆಯದು. ರಾಜಕೀಯ ನಿಂತ ನೀರಲ್ಲ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ಪಕ್ಷ ಅಧಿಕಾರಕ್ಕೆ ಬರುತ್ತೆ ಹೋಗುತ್ತೆ, ಅದೇ ರೀತಿ‌ ನಿಮ್ಮ ಪಕ್ಷದ ಕಾರ್ಯಕರ್ತರು ಸರಿಯಾದ ಮಾರ್ಗದರ್ಶನ ನೀಡಿ ಉತ್ತಮ ಕಾರ್ಯಕರ್ತರಾಗಿ ಬೆಳೆಸುವ ಜವಾಬ್ದಾರಿ ತಾಲೂಕಿನ ಕಾಂಗ್ರೆಸ್ ನ ಮುಂಚೂಣಿ ನಾಯಕರ ಕರ್ತವ್ಯ.

ಮುಂದೆ ಈ ರೀತಿ ನಡೆಯದಂತೆ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸಿ ಇನ್ನೂ ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕಾಗಿದೆ.

Exit mobile version