ಗೇರುಕಟ್ಟೆ: ಸ.ಉ.ಪ್ರಾ.ಶಾಲೆ , ಕೊರಂಜ, ಗೇರುಕಟ್ಟೆ ಇಲ್ಲಿ ” ನಮ್ಮ ಭೂಮಿ” ಎಂಬ ಘೋಷಣೆಯನ್ನು ಹೊಂದಿರುವ 2024 ರ ವಿಶ್ವ ಪರಿಸರ ದಿನಾಚರಣೆಯನ್ನು ಕರ್ನಾಟಕ ಅರಣ್ಯ ಇಲಾಖೆ, ಮಂಗಳೂರು ವಿಭಾಗ , ಬೆಳ್ತಂಗಡಿ ಪ್ರಾದೇಶಿಕ ವಲಯ ಹಾಗೂ ಕೊರಂಜ ಶಾಲಾ ಇಕೋ ಕ್ಲಬ್ ಇದರ ಸಹಯೋಗದೊಂದಿಗೆ ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ನೇರಳೆ, ಸಂಪಿಗೆ, ರಂಬುಟಾನ್, ಪನ್ನೇರಳೆ, ಹಲಸು, ಪುನರ್ಪುಳಿ ಗಿಡಗಳನ್ನು ಶಾಲಾ ಆವರಣದಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಮಕ್ಕಳೊಡಗೂಡಿ ಅರಣ್ಯಾಧಿಕಾರಿಗ ರವೀಂದ್ರ ಗಿಡ ನೆಡುವ ಮೂಲಕ ಸಾಂಕೇತಿಕವಾಗಿ ಉದ್ಘಾಟಿಸಿದರು.
ಸುಮಾರು 200 ಗಿಡಗಳನ್ನು ಆಸಕ್ತ ಶಾಲಾ ಮಕ್ಕಳಿಗೆ ಕೊಡಮಾಡುವುದರ ಮೂಲಕ “ಮನೆಗೊಂದು ಮರ” ಕಾರ್ಯಕ್ರಮವನ್ನು ಕೈಗೊಳ್ಳಲಾಯಿತು. ವಿದ್ಯಾರ್ಥಿಗಳು ಸಂಭ್ರಮದಿಂದ “ತನ್ನ ಗಿಡಕ್ಕೆ ತಾನೇ ಜವಾಬ್ದಾರಿ” ಎಂಬ ಪ್ರತಿಜ್ಞೆಯೊಂದಿಗೆ ಮನೆಗೆ ಕೊಂಡೊಯ್ದರು.
ಶಿಕ್ಷಕ ಮಹಾಂತೇಶ್ ನಿರ್ವಹಿಸಿದರು. ಅರಣ್ಯ ಇಲಾಖಾ ಸಿಬ್ಬಂದಿಗಳು, ಹಾಗೂ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.