ಕನ್ಯಾಡಿ-1: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ, ಮಂಗಳೂರು ಸಾಮಾಜಿಕ ಅರಣ್ಯ ವಿಭಾಗ, ಬೆಳ್ತಂಗಡಿಯ ಇವರ ವತಿಯಿಂದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ, ಕನ್ಯಾಡಿ-1 ಇಲ್ಲಿ ಸುಮಾರು 15 ಬಗೆಯ ಹಣ್ಣಿನ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು.
ಸಾಮಾಜಿಕ ಅರಣ್ಯ ಬೆಳ್ತಂಗಡಿ ಇದರ ಉಪ ವಲಯ ಅರಣ್ಯ ಅಧಿಕಾರಿ ಅಶೋಕ್ ಇವರು ಮಕ್ಕಳಿಗೆ ಅರಣ್ಯಗಳನ್ನು ಬೆಳೆಸುವುದರಿಂದ ಆಗುವ ಉಪಯೋಗಗಳನ್ನು ತಿಳಿಸಿಕೊಟ್ಟರು.
ಶೇಖರ್ ಅರಣ್ಯ ವೀಕ್ಷಕರು, ನಡ ಹಾಗೂ ಅರಣ್ಯ ಸಿಬ್ಬಂದಿಯವರಾದ ದೀಕ್ಷಿತ್ ರವರು ಸಹಕರಿಸಿದರು.ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ನೋಣಯ್ಯ ಗೌಡ ಇವರು ಉಪಸ್ಥಿತರಿದ್ದು ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಿದರು.
ಎಸ್ ಡಿ.ಎಂ ಸಿ ಸದಸ್ಯ ರಘುಚಂದ್ರ ಶೆಟ್ಟಿ, ಮುಖ್ಯೋಪಾಧ್ಯಾಯ ಹನುಮಂತರಾಯ, ಶಿಕ್ಷಕ ವಿಕಾಸ್ ಕುಮಾರ್ ವೈ, ಶಿಕ್ಷಕಿಯರಾದ ಶ್ರೀದೇವಿ , ಪ್ರಮೀಳಾ, ಹರಿತಾ ಉಪಸ್ಥಿತರಿದ್ದರು.