Site icon Suddi Belthangady

ಗುರುವಾಯನಕೆರೆ: ಎಕ್ಸೆಲ್ ಪ.ಪೂ ಕಾಲೇಜಿನ ವಿದ್ಯಾರ್ಥಿ ಪ್ರಜ್ವಲ್ ಗೆ ನೀಟ್ ಪರೀಕ್ಷೆಯಲ್ಲಿ 720ರಲ್ಲಿ 710 ಅಂಕ- ಸಂಸ್ಥೆಯ ವತಿಯಿಂದ 10 ಲಕ್ಷ ಮೊತ್ತದೊಂದಿಗೆ ಸನ್ಮಾನ

ಗುರುವಾಯನಕೆರೆ: ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಪ್ರಜ್ವಲ್ ಗೆ ನೀಟ್ ನಲ್ಲಿ 720ರಲ್ಲಿ 710 ಪಡೆದು ರಾಷ್ಟ್ರೀಯ ವೈದ್ಯಕೀಯ ಶಿಕ್ಷಣ ಪ್ರವೇಶ ಪರೀಕ್ಷೆಯಾದ ನೀಟ್ ಗ್ರಾಮೀಣ ಪರಿಸರದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾದ ಪ್ರಜ್ವಲ್ ಎಚ್.ಎಂ 720 ಅಂಕಗಳ ಪೈಕಿ 710 ಅಂಕಗಳನ್ನು ಗಳಿಸಿ ಕೊಳ್ಳುವ ಮೂಲಕ ರಾಷ್ಟ್ರ ಮಟ್ಟದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ.

ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ರಾಜ್ಯದ ಇತಿಹಾಸದಲ್ಲಿ ನೂತನ ಮೈಲಿಗಲ್ಲು ಸ್ಥಾಪಿಸಿರುವ ಎಕ್ಸೆಲ್ ಕಾಲೇಜಿನಲ್ಲಿ ರಾಜ್ಯ ಹಾಗೂ ಹೊರರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಆಗಮಿಸಿ ಅಭ್ಯಾಸ ಮಾಡುತ್ತಿದ್ದಾರೆ.

ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಇನ್ನಷ್ಟು ವಿದ್ಯಾರ್ಥಿಗಳು ಅತ್ಯುತ್ತಮ ನೀಟ್ ಫಲಿತಾಂಶ ಪಡೆದಿದ್ದು ಎಕ್ಸೆಲ್ ನ ಸಂಚಾಲಕ ಸುಮಂತ್ ಕುಮಾರ್ ಜೈನ್ 10 ಲಕ್ಷ ಬಹುಮಾನ ಘೋಷಿಸಿದ್ದು ಜೂ. 5ರಂದು ವಿದ್ಯಾರ್ಥಿ ಪ್ರಜ್ವಲ್ ಗೆ ಶಾಲು ಹೊದಿಸಿ, ಪೇಟಾ ತೊಡಿಸಿ, ಹಾರ ಹಾಕಿ, ಫಲಪುಷ್ಪ, ಸ್ಮರಣಿಕೆಯ ಜೊತೆಗೆ ರೂ.10 ಲಕ್ಷ ರೂಪಾಯಿ ನಗದು ನೀಡಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್, ಕಾರ್ಯದರ್ಶಿ ಅಭಿರಾಮ್ ಬಿ.ಎಸ್, ಪ್ರಾಂಶುಪಾಲ ಡಾ.ನವೀನ್ ಕುಮಾರ್ ಮರಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Exit mobile version