Site icon Suddi Belthangady

ಬೆಳ್ತಂಗಡಿ ತಾಲೂಕಿನ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಎಕ್ಸೆಲ್ ಕೋಚಿಂಗ್ ಸೆಂಟರ್ ಗಳಲ್ಲಿ ಉಚಿತ ಕೋಚಿಂಗ್ ಪಡೆಯುವ ಸುವರ್ಣಾವಕಾಶ

ಬೆಳ್ತಂಗಡಿ: ಗಣಿತ, ವಿಜ್ಞಾನಗಳಂಥ ಕಠಿಣವೆನಿಸುವ ವಿಷಯಗಳಲ್ಲಿ ಕೂಡಾ
100 ಕ್ಕೆ 100 ಅಂಕ ಪಡೆಯುವ ಛಲ ಇದೆಯೇ ? ನಾಡಿನ ಹೆಸರಾಂತ ಶಿಕ್ಷಕರ ಗರಡಿಯಲ್ಲಿ ಪಳಗಿ, ಎಲ್ಲಾ ವಿಷಯಗಳನ್ನು ಕರಗತ ಮಾಡಿಕೊಳ್ಳುವ ಆಸೆ ಇದೆಯೇ ? ಭವಿಷ್ಯದಲ್ಲಿ ವಿಜ್ಞಾನ ಅಥವಾ ವಾಣಿಜ್ಯ ವಿಭಾಗಕ್ಕೆ ಸೇರಿ ಉನ್ನತ ಕನಸುಗಳನ್ನು ನನಸಾಗಿಸುವ ಶಕ್ತಿ ಬರಬೇಕೆ ? ಇನ್ನೇಕೆ ತಡ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದ ಶಿಕ್ಷಣದಲ್ಲಿ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವಂಥ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ಅಂಗ ಸಂಸ್ಥೆಯಾದ ಎಕ್ಸೆಲ್ ಕೋಚಿಂಗ್ ಸೆಂಟರ್ ಉಜಿರೆ ಇದೀಗ, ಉಜಿರೆ ಮತ್ತು ಬೆಳ್ತಂಗಡಿ ಎರಡು ಕಡೆಗಳಲ್ಲಿ ಕಾರ್ಯ ನಿರ್ವಹಿಸಲಿದೆ.

ರಸಾಯನ ವಿಜ್ಞಾನ ಪ್ರಾಧ್ಯಾಪಕರು ಹಾಗೂ ನೀಟ್, ಜೆ ಇ ಇ, ಸಿ ಇ ಟಿ ಟ್ರೈನರ್ ಆಗಿ, ಇನ್ಫಿನಿಟಿ ಶಿಕ್ಷಣ ಪ್ರತಿಷ್ಠಾನದ ಮೂಲಕ ಗುರುವಾಯನಕೆರೆಯಲ್ಲಿ ಎಕ್ಸೆಲ್ ವಿದ್ಯಾ ಸಂಸ್ಥೆಗಳನ್ನು ಸ್ಥಾಪಿಸಿ, ಮುನ್ನಡೆಸುತ್ತಿರುವ ಸುಮಂತ್ ಕುಮಾರ್ ಜೈನ್ ಅವರ ಗ್ರಾಮೀಣ ಪರಿಸರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಹೊಂಗನಸಿಗೆ ಪೂರಕವಾಗಿ ಎಕ್ಸೆಲ್ ಕೋಚಿಂಗ್ ಸೆಂಟರ್ ಗಳು ಕ್ಷಮತೆ ತೋರಲಿವೆ.

9 ಮತ್ತು 10 ನೆಯ ತರಗತಿಯಲ್ಲಿ ವ್ಯಾಸಂಗ ನಡೆಸುತ್ತಿರುವ ವಿದ್ಯಾರ್ಥಿಗಳೇ … ಇನ್ನೇಕೆ ತಡ..?. ಕೂಡಲೇ ಎಕ್ಸೆಲ್ ಕೋಚಿಂಗ್ ಕ್ಲಾಸ್ ಗಳಿಗೆ ಹಾಜರಾಗಿ, ನಿಮ್ಮ ಕನಸು ನನಸಾಗಿಸಿ…ಉಜಿರೆಯಲ್ಲಿ ದಾಖಲಾತಿ ಮಾಡಲು ಸಹನಾ ಜೈನ್ 8747043479

ಬೆಳ್ತಂಗಡಿಯಲ್ಲಿ ಪ್ರವೇಶಾತಿ ಪಡೆಯಲು ಕು. ದಿವ್ಯಾ 8867242769 …
ಸಂಪರ್ಕಿಸಿ.

Exit mobile version